ಸ್ಪೀಕರ್ ಆಟ ಮೊದಲೇ ನಿರ್ಧಾರಿತ..!?

Ramesh kumar

09-07-2019

ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅಸ್ತಿತ್ವ ಡೋಲಾಯಮಾನವಾಗಿದೆ. ಈಗಾಗಲೇ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದು ಅದರಲ್ಲಿ ಕೆಲವರು ಬಿಜೆಪಿ ಗೆ ಬೆಂಬಲ ಘೋಷಿಸಿದ್ದಾರೆ. ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿದ 8 ಮಂದಿ ಶಾಸಕರ ರಾಜೀನಾಮೆ ಪತ್ರಗಳು ಕಾನೂನುಬದ್ಧವಾಗಿಲ್ಲ ಎಂದಿದ್ದಾರೆ. ಆದರೆ ಕುತೂಹಲಕಾರಿ ಅಂಶವೆಂದರೆ ಸ್ಪೀಕರ್ ರಮೇಶ್ ಕುಮಾರ್ ಆಟ ಮೊದಲೇ ನಿರ್ಧಾರಿತವಾಗಿತ್ತು ಎನ್ನುವುದು.

ಹೌದು.. ಅತೃಪ್ತ ಶಾಸಕರು ಏಕಾಏಕಿ ರಾಜೀನಾಮೆ ನೀಡಿದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಕಳೆದ 8-10 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ. ಹಾಗಾಗಿ ಇದೀಗ ಭಾರೀ ಸಂಭಾವಿತರಂತೆ ಕಾಣುವ ರಮೇಶ್ ಕುಮಾರ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಜಗಜ್ಜಾಹೀರಾಗಿದೆ.

ಈ ಮೊದಲು ಬಿಎಸ್ ವೈ ಮಾಡಿದ್ದಾರೆನ್ನಲಾದ ಆಪರೇಷನ್ ಕಮಲ ವಿಚಾರದಲ್ಲಿಯೂ ರಮೇಶ್ ಕುಮಾರ್ ವಿರುದ್ಧ ಆರೋಪ ಕೇಳಿಬಂದಿತ್ತು.  ಅಲ್ಲದೇ ಈ ಮೊದಲು ಕಾಂಗ್ರೆಸ್ ನಿಂದ ರಮೇಶ್ ಕುಮಾರ್ ಗೆ ಟಿಕೆಟ್ ಕೊಡಿಸಲು ಸಹಾಯ ಮಾಡಿದವರು ಡಿ.ಕೆ ಶಿವಕುಮಾರ್. ಹೀಗಾಗಿ ಇದೀಗ ರಮೇಶ್ ಕುಮಾರ್, ಪಕ್ಷಕ್ಕೆ ಹಾಗೂ ಡಿ ಕೆ ಶಿವಕುಮಾರ್ ಅವರಿಗೆ ಋಣಸಂದಾಯ ಮಾಡುವ ಕಾಲ ಬಂದಿದೆ ಎಂದೇ ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Ramesh kumar MLA Congress DK Shivkumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ