“ಬಂಡಾಯ ಶಾಸಕರ ರಾಜೀನಾಮೆ ಪತ್ರ ನಿಯಮಾನುಸಾರ ಇಲ್ಲ’’

Ramesh Kumar Statement

09-07-2019

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ನ 13 ಶಾಸಕರ ರಾಜೀನಾಮೆ ವಿಚಾರದ ಕುರಿತು ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬಂಡಾಯ ಶಾಸಕರ ಪೈಕಿ ಯಾರೊಬ್ಬರೂ ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ ಎಂದಿರುವ ಅವರು, ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಹೇಳಿದ್ದಾರೆ. ಜೊತೆಗೆ, 13 ಶಾಸಕರ ಪೈಕಿ 8 ಶಾಸಕರ ರಾಜೀನಾಮೆ ಪತ್ರ ನಿಯಮಾನುಸಾರ ಇಲ್ಲ. ಅವರಿಗೆ ಖುದ್ದಾಗಿ ಬಂದು ಭೇಟಿಯಾಗಲು ಸಮಯ ನೀಡಿದ್ದೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramesh Kumar Resignation MLA Karnataka Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ