ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಗೆ ನೋಟಿಸ್

SIT issued Notice to Roshan Beig

09-07-2019

ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐ ಟಿ ರೋಷನ್ ಬೇಗ್ ಗೆ ನೋಟಿಸ್ ಜಾರಿ ಮಾಡಿದೆ. ಜುಲೈ 11 ರಂದು ವಿಚಾರಣೆಗೆ ಹಾಜರಾಗುವಂತೆ ಬೇಗ್ ಗೆ ನೋಟಿಸ್ ನೀಡಿದೆ.

ಜನರಿಗೆಲ್ಲ ಪಂಗನಾಮ ಹಾಕಿ ಓಡಿಹೋಗಿರುವ ಮನ್ಸೂರ್ ಖಾನ್ ಈ ಮೊದಲು ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಸಕ ರೋಷನ್​ ಬೇಗ್​ ನನ್ನಿಂದ 400 ಕೋಟಿ ಹಣ ಪಡೆದುಕೊಂಡಿದ್ದಾರೆ. ಕೇಳಿದರೆ ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ನಾನು ಹಳ್ಳಿಯೊಂದರಲ್ಲಿ ನನ್ನ ಕುಟುಂಬದೊಂದಿಗೆ ತಲೆ ಮರೆಸಿಕೊಂಡಿದ್ದೇನೆ. ನೀವು ಈ ವಿಡಿಯೋ ಕೇಳುವುದರೊಳಗೆ ನಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ಹೇಳಿದ್ದ.

ಆದರೆ ಮನ್ಸೂರ್ ಆರೋಪವನ್ನು ರೋಷನ್ ಬೇಗ್ ನಿರಾಕರಿಸಿದ್ದರು.


ಸಂಬಂಧಿತ ಟ್ಯಾಗ್ಗಳು

SIT IMA Roshan Beig Mansoor Khan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ