ಸಂವಿಧಾನ ಬದ್ಧವಾದ ನಿರ್ಧಾರ: ರಮೇಶ್ ಕುಮಾರ್

Ramesh Kumar Statement

09-07-2019

ಬೆಂಗಳೂರು: ನಾನು ಇಂದು ಕಚೇರಿ ಯಲ್ಲಿರುತ್ತೇನೆ. ಯಾವುದೇ ಶಾಸಕರು ಬಂದು ಭೇಟಿಯಾಗಬಹುದು. ಇದಕ್ಕೆ ಯಾವುದೆ ನಿರ್ಬಂಧ ಇಲ್ಲ ಎಂದು ವಿಧಾನ ಸಭಾದ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನನ್ನ ಯಾವ ಶಾಸಕರು ಸಂಪರ್ಕ ಮಾಡಿ ಕಾಲಾವಕಾಶ ಕೇಳಿಲ್ಲ. ಸಂವಿಧಾನಕ್ಕೆ ಬದ್ದವಾಗಿ ನಾನು ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ.

ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಇಲ್ಲಿ ದುರ್ವಾಸನೆ ಇದೆ ಎಂದರೆ ಹೇಗಾಗುತ್ತದೆ. ನಾನಿರುವುದೇ ಸ್ಲಂನಲ್ಲಿ. ಹೀಗಾಗಿ ಸ್ಲಂನಲ್ಲಿ ಇದ್ದುಕೊಂಡು ಸುಗಂಧದ ಪರಿಮಳ ಬರಬೇಕು ಎಂದರೆ ಆಗುತ್ತಾ ಎಂದು ಪ್ರಶ್ನಿಸಿದರು.

ನನ್ನ ಸ್ಥಾನದಲ್ಲಿ ನಾನು ಹೇಗೆ ವರ್ತಿಸಬೇಕು. ಜನರು ಏನು ನಿರೀಕ್ಷೆ ಮಾಡುತ್ತಾರೆ, ಸಂವಿಧಾನ ಏನು ನಿರೀಕ್ಷೆ ಮಾಡುತ್ತೆ ಇಷ್ಟಕ್ಕೆ ನಾನು ಸೀಮಿತವಾಗಿರುತ್ತೇನೆ. ಸದ್ಯಕ್ಕೆ ಯಾವ ಶಾಸಕರು ಸಮಯ ಕೇಳಿಲ್ಲ. ಜನರ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಕಾರ್ಯದರ್ಶಿ ಅವರು ರಾಜೀನಾಮೆಯಲ್ಲಿ ತೆಗೆದುಕೊಂಡಿದ್ದಾರೆ. ನಾನು ಹೋಗಿ ನೋಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಮೊದಲು ತಾಳಿಕಟ್ಟುವುದು, ಜೀರಿಗೆ, ಬೆಲ್ಲ ಇಡುವುದು ಬಹಳ ಮುಖ್ಯವಾಗಿತ್ತು. ಜನರು ಅಕ್ಷತೆ ಹಾಕಲು ಕಾಯುತ್ತಿದ್ದರು. ಈಗ ಹುಡುಗ ತಾಳಿ ಕಟ್ಟಿದ್ದಾನಾ ಎಂದು ನೋಡುವುದಿಲ್ಲ. ಬರೀ ವೈಭವದ ರೀತಿಯಾಗಿದೆ ಎಂದು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ಮಾಡಿದರು.


ಸಂಬಂಧಿತ ಟ್ಯಾಗ್ಗಳು

Congress Ramesh Kumar JDS MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ