ಕಾಂಗ್ರೆಸ್ ಸಚಿವರ ರಾಜಿನಾಮೆ ಸಿದ್ದು ಕೈಯಲ್ಲಿ

Resignations of congress leaders in Siddaramaiah

08-07-2019

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ.
ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಶಾಸಕಾಂಗ ನಾಯಕರಿಗೆ ನೀಡಿದ್ದಾರೆ.
ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಪಕ್ಷಕ್ಕಾಗಿ ಎಲ್ಲರೂ ರಾಜೀನಾಮೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ಪಕ್ಷಕ್ಕಾಗಿ ರಾಜೀನಾಮೆ ನೀಡಿದ್ದೇವೆ. ಮುಂದೆ ಪಕ್ಷದ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಪಕ್ಷ ರಾಜೀನಾಮೆ ನೀಡಬೇಕೆಂದು ಹೇಳಿತ್ತು. ಹಾಗಾಗಿ ರಾಜೀನಾಮೆ ನೀಡಿದ್ದೇವೆ. ಪಾರ್ಟಿಯ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ಇದೂವರೆಗೂ ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಒಂದು ವೇಳೆ ಮುಂಬೈಗೆ ತೆರಳುವಂತೆ ಸೂಚಿಸಿದ್ರೆ ಹೋಗುತ್ತೇನೆ. ಇದೂವರೆಗೂ ಆ ರೀತಿಯ ಆದೇಶ ನನಗೆ ತಲುಪಿಲ್ಲ ಎಂದು ಹೇಳಿದರು


ಸಂಬಂಧಿತ ಟ್ಯಾಗ್ಗಳು

Siddaramaiah Congress Congress MLAs Politics


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ