ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ವೈಲ್ಡ್ ಆಗುತ್ತೇನೆ: ಸದಾನಂದಗೌಡ

I will be active in developing my region

08-07-2019

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಕ್ರೀಯಾಶೀಲನಾಗಿ ಕೆಲಸ ಮಾಡಿ ತೋರಿಸಿ ಮಾದರಿ ಕ್ಷೇತ್ರವನ್ನಾಗಿ ಬೆಂಗಳೂರು ಉತ್ತರಕ್ಷೇತ್ರವನ್ನು ಮಾಡಲಿದ್ದೇನೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಆರ್.ಟಿ.ನಗರದ ಎಚ್.ಎಂ.ಟಿ. ಮೈದಾನದಲ್ಲಿ ಆಯೋಜಿಸಿದ ಕೃತಜ್ಞತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮನ್ನು ಎಲ್ಲರೂ ಮೈಲ್ಡ್ ಎನ್ನುತ್ತಾರೆ ಆದರೆ ಇನ್ನೂ ಮುಂದೆ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ವೈಲ್ಡ್ ಆಗಬೇಕಾಗುತ್ತದೆ ಎಂದರು

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವ  ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಅದೇ ರೀತಿ ಪಕ್ಷಪಾತ ಧೋರಣೆಯಿಂದ ವೃತ್ತಿಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ದವು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಅಭಿವೃದ್ಧಿ ಕುರಿತಂತೆ ಸರಕಾರಿ ಯೋಜನೆಗಳ ಅನುಷ್ಠಾನ ಸಂಬಂಧ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಶೀಲನೆ ನಡೆಸಲಾಗುವುದು ಎಂದರು.ಯಾವುದೇ ಕಾರಣಕ್ಕೂ ಬ್ರಷ್ಟಾಚಾರ ಹಾಗೂ ಹಗರಣಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಗೆಲುವು ಮತದಾರರು ಹಾಗೂ ಪಕ್ಷದ ಕಾರ್ಯಕರ್ತರ ಗೆಲುವು ಎಂದು ಅವರು ಇದೆ ಸಂದರ್ಭದಲ್ಲಿ ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಉಪನಾಯಕ ಡಾ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಅರವಿಂದ್ ಲಿಂಬಾವಲಿ, ರಾಜುಗೌಡ, ಬಿಜೆಪಿ ಅಲ್ಪಸಂಖ್ಯಾತ  ಮೋರ್ಚಾದ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಂ, ಬಿಜೆಪಿ ಯುವ ಮುಖಂಡ ಹರೀಶ್, ಹಾಗೂ ಗಂಗಬೈರಯ್ಯ ಹಾಜರಿದ್ದರು.


ಸಂಬಂಧಿತ ಟ್ಯಾಗ್ಗಳು

D V Sadananda gowda BJP Bengaluru uttara Chemical and fertilizers minister


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ