ಯಕ್ಷಗಾನ ಕಲಾವಿದ ಬಂಗಾರಾಚಾರಿ ಅವರಿಗೆ ಪಾರ್ಥಿಸುಬ್ಬ ಪ್ರಶಸ್ತಿ

Yakshagana artist Bangarachari gets Parthisubba award

08-07-2019

ಬೆಂಗಳೂರು: ಮೂಡಲಪಾಳ್ಯ ಯಕ್ಷಗಾನ ಕಲಾವಿದ ಬಂಗಾರಾಚಾರಿ ಅವರನ್ನು ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕಾಡೆಮಿಯ ಗೌರವ ಪ್ರಶಸ್ತಿಗೆ ರಾಮರಾಜೇ ಅರಸ್, ಸುಬ್ರಮಣ್ಯ ಭಟ್ ಮಾಂಬಾಡಿ, ಗುಂಡ್ಮಿ ಸದಾನಂದಾ ಐತಾಳ್, ಎಸ್.ಸಿ. ಜಗದೀಶ್ ಹಾಗೂ ಕೆ. ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ  ಪ್ರೊ. ಎಂ.ಎ.ಹೆಗ್ಡೆ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಗಾರಾಚಾರಿ ಅವರನ್ನು ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ ಮಾಡಲಾಗಿದ್ದು ಪಾರ್ಥಿಸುಬ್ಬ ಪ್ರಶಸ್ತಿಗೆ ಪುರಸ್ಕೃತರಿಗೆ 1 ಲಕ್ಷ ರೂ. ಮೊತ್ತ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ, ಹಾರ, ಶಾಲು, ಪೇಟ, ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ, 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಹಾಗೂ ವಾರ್ಷಿಕ 3 ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.

ಗೌರವ ಪ್ರಶಸ್ತಿಗೆ ಭಾಜನರಾದವರಿಗೆ ತಲಾ 50 ಸಾವಿರ ಮೊತ್ತ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ, ಗೌರವಿಸಲಾಗುವುದು.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಕುಂಬ್ಳೆ ಶ್ರೀಧರ ರಾವ್, ಮೋಹನ ಬೈಪಡಿತ್ತಾಯ, ಮನೂರು ನರಸಿಂಹ ಮಧ್ಯಸ್ಥ, ನಿತ್ಯಾನಂದ ಹೆಬ್ಬಾರ, ಕೃಷ್ಣಮಾಣಿ ಅಗೆರ ಸೇರಿದಂತೆ 10 ಮಂದಿ ಆಯ್ಕೆಯಾಗಿದ್ದು, ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ಮೊತ್ತ, ಪ್ರಮಾಣ ಪತ್ರ ನೀಡಿ, ಪುರಸ್ಕರಿಸುವುದಲ್ಲದೆ ಪುಸ್ತಕ ಬಹುಮಾನಕ್ಕೆ ಡಾ. ಎನ್. ನಾರಾಯಣಶೆಟ್ಟಿ, ಡಾ. ಕಂಬಿನಾಲೆ ವಸಂತ ಭಾರತಧ್ವಜ್, ಡಾ. ರಾಘವ ನಂಬಿಯಾರ್ ಆಯ್ಕೆಯಾಗಿದ್ದು, ಪುರಸ್ಕೃತರಿಗೆ 25 ಸಾವಿರ ಮೊತ್ತ, ಪ್ರಮಾಣ ಪತ್ರ ನೀಡಿ, ಗೌರವಿಸಲಾಗುವುದು ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ಸಿರಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Yakshagana Yakshagana award Bangarachari Parthisubba award


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ