ಬಿಜೆಪಿಯಲ್ಲೂ ರಿವರ್ಸ್ ಆಪರೇಷನ್ ಭೀತಿ !

Karnataka Government crisis

08-07-2019

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ರಿವರ್ಸ್ ಆಪರೇಷನ್‍ಗೂ ಮುಂದಾಗಿದ್ದಾರೆಂಬ ಮಾಹಿತಿ ಹೊರಬಿದ್ದಿದ್ದು ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಎಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಲು ನಿರ್ಧರಿಸಲಾಗಿದೆ.

ಕಳೆದ ರಾತ್ರಿ ಅನೇಕ ಕಾಂಗ್ರೆಸ್ ಮುಖಂಡರು ಬಿಜೆಪಿಯ ಅತೃಪ್ತರಿಗೆ ಗಾಳ ಹಾಕಿದ್ದಾರೆ. ಕೈ ಮುಖಂಡರಿಂದ ನಡೆಯಲಿರುವ ರಿವರ್ಸ್ ಅಪರೇಷನ್ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಬಿಜೆಪಿ ಪಾಳಯದ ಶಾಸಕರಿಗೆ ಭರ್ಜರ ಅಫರ್ ನೀಡಿ ಸೆಳೆಯಲು ಯತ್ನಿಸಲಾಗಿದೆ. ಸುಮಾರು ನಾಲ್ಕೈದು ಜನ ಅತೃಪ್ತ ಕಮಲ ಪಾಳಯದ ಶಾಸಕರಿಗೆ ಗಾಳ ಹಾಕಲು ಮೈತ್ರಿ ಪಾಳಯ ಸಜ್ಜಾಗಿದೆ. ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಕಮಲ ಪಾಳಯದ ಶಾಸಕರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಈಗ ರಿವರ್ಸ್ ಅಪರೇಷನ್ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಇದಕ್ಕಾಗಿ ನಿನ್ನೆ ತಡರಾತ್ರಿಯವರೆಗೆ ಆಪ್ತರ ಜೊತೆ ಬಿಎಸ್‍ವೈ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಈ ಕುರಿತು ಶಾಸಕರನ್ನು ಯಡಿಯೂರಪ್ಪ ತಮ್ಮ ನಿವಾಸಕ್ಕೆ ಕರೆದು ಅವರೊಂದಿಗೆ ಮಾತನಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

Government BJP Congress MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ