ರಾಜಿನಾಮೆ ನಿರ್ಧಾರ ಅಚಲ: ರಾಮಲಿಂಗಾರೆಡ್ಡಿ

Karnataka Government in crisis

08-07-2019

ಬೆಂಗಳೂರು: ನಾನು ೩೦ ವರ್ಷ ದಿಂದ ಶಾಸಕನಾಗಿದ್ದೇನೆ. ಯಾವುದೇ ಹುದ್ದೆಗೆ ಲಾಬಿ ಮಾಡಿಲ್ಲ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ ಎಂದು ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ

ನಾನು ಮುಖ್ಯ ಮಂತ್ರಿ ಜತೆ ಮಾತುಕತೆ ನಡೆಸಿಲ್ಲ. ನನ್ನ ರಾಜೀನಾಮೆ ನಿರ್ಧಾರ ಅಚಲ. ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ.‌ ನಾನು ಮುಂಬಯಿಗೂ ಹೋಗಲ್ಲ ದೆಹಲಿಗೂ ಹೋಗಲ್ಲ. ಬೆಂಗಳೂರಿನಲ್ಲಿ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಪುತ್ರಿ ಸೌಮ್ಯ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅವರ ವಿವೇಚನೆಗೆ ಬಿಟ್ಟಿದ್ದೇವೆ. ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಹಲವಾರು ಕಾರಣಗಳಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Ramalingareddy BJP Congress MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ