ತಪ್ಪಿದ ಭಾರಿ ಅನಾಹುತ--ಹತ್ತು ಬಾಂಬ್ ವಶ

10 alive bombs in a home near chikkabanavara

08-07-2019

ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಮಿಂಚಿನ  ಕಾರ್ಯಾಚರಣೆಯಿಂದಾಗಿ ಬೆಂಗಳೂರಿನಲ್ಲಿ ನಡೆಯಬಹುದಾಗಿದ್ದ ಬಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ

ಖಚಿತ ಮಾಹಿತ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಎನ್ ಐ ಎ ಅಧಿಕಾರಿಗಳ ಈ ಪ್ರಯತ್ನದಿಂದ  ಸ್ಫೋಟದ ಸಂಚನ್ನು ವಿಫಲಗೊಳಿಸಲಾಗಿದೆ.

ಚಿಕ್ಕಬಾಣಾವರ ರೈಲು ನಿಲ್ದಾಣ ಸಮೀಪದಲ್ಲಿ ವಾಸವಿದ್ದ ಶಂಕಿತ ಹಬೀಬುರ್ ರೆಹಮಾನ್ ಮನೆಯೊಂದರ ಮೇಲೆ ಎನ್‍ಐಎ ದಾಳಿ ನಡೆಸಿತು. ಈ ವೇಳೆ 10 ಜೀವಂತ ಬಾಂಬ್ ಮತ್ತು ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಪತ್ತೆಯಾಗಿದೆ. ಇವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಸೆರೆ ಸಿಕ್ಕಿದ್ದ ಶಂಕಿತ ಉಗ್ರ ಹಬೀಬುರ್ ರೆಹಮಾನ್,  ಇಲ್ಲಿ ಕಳೆದ ಎರಡು ವರ್ಷಗಳಿಂದ ಮುಸ್ತಾನ್ ಎಂಬವರಿಗೆ ಸೇರಿದ ಕಟ್ಟಡವನ್ನ ಬಾಡಿಗೆ ಪಡೆದಿದ್ದನು. ಬಳಿಕ ಮನೆಯನ್ನೇ ಬಾಂಬ್ ಫ್ಯಾಕ್ಟರಿ ಮಾಡಿಕೊಂಡಿದ್ದನು ಎನ್ನಲಾಗಿದೆ.

ಜೊತೆಗೆ ಜೀವಂತ ಬುಲೆಟ್‍ಗಳು, ಗ್ರೆನೇಡ್ ಮಾಡುವುದು ಹೇಗೆ ಮತ್ತು ಬಾಂಬ್ ಬ್ಲಾಸ್ಟ್ ಮಾಡುವುದರ ಬಗ್ಗೆ ಪುಸ್ತಕ ಸಿಕ್ಕಿದೆ. ಸದ್ಯಕ್ಕೆ ಎನ್‍ಐಎ ಅಧಿಕಾರಿಗಳು ದಾಳಿಯಲ್ಲಿ ಸಿಕ್ಕಿ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದುರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Alive bomb Chikkabanavara railway station grenade Bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ