ಬೈಕ್‍ಗಳಿಗೆ ಬೆಂಕಿ

bikes set on fire

06-07-2019

ಯಶವಂತಪುರದ ಮೋಹನ್ ಕುಮಾರ್ (ಎಂ.ಕೆ) ನಗರದ ಮನೆಮುಂದೆ ಶುಕ್ರವಾರ ರಾತ್ರಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳಿಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಲಾಗಿದೆ.

ಹೊಂಡಾ ಆಕ್ಟೀವಾ, ಪಲ್ಸರ್, ಹೀರೋ ಹೊಂಡಾ ಸೇರಿದಂತೆ, ಐದು ಬೈಕ್‍ಗಳಲ್ಲಿ ಒಂದು ಸಂಪೂರ್ಣ ಸುಟ್ಟುಹೋಗಿದ್ದರೆ, ಉಳಿದ ನಾಲ್ಕು ಬೈಕ್‍ಗಳು ಭಾಗಶಃ ಸುಟ್ಟಿವೆ. ಸ್ಥಳದಲ್ಲಿ 7 ಬೈಕ್‍ಗಳನ್ನು ನಿಲ್ಲಿಸಿದ್ದು, ರಾತ್ರಿ 2ರ ವೇಳೆ ಬೆಂಕಿ ಹಚ್ಚಲಾಗಿದೆ.

ಜಾಗದ ವಿಚಾರದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದ್ದು, ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bikes Family war bikes on fire yashawantapura


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ