ಫುಟ್‍ಪಾತ್‍ಗೆ ಡಿಕ್ಕಿ ಹೊಡೆದು ಯುವಕ ಸಾವು

teen dies after dashing foot path

06-07-2019

ಬೆಂಗಳೂರು,ಜು.6-ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಜೀವನ್ ಭೀಮಾನಗರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‍ಡಿಒ) ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಸುದ್ದಗುಂಟೆಪಾಳ್ಯದ ಲೋಕೇಶ್ (22) ಮೃತಪಟ್ಟವರು. ಡಿಆರ್‍ಡಿಒದಲ್ಲಿ ಡೋಬಿ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದ ಲೋಕೇಶ್ ರಾತ್ರಿ 1.15ರ ವೇಳೆ ಭಾಗ್ಮನೆ ಟೆಕ್ ಪಾರ್ಕ್ ಕಡೆಯಿಂದ ಡಿಆರ್‍ಡಿಒ ಸಂಸ್ಥೆ ಒಳಗೆ ಬೈಕ್‍ನಲ್ಲಿ ಹೋಗುವಾಗ ಆಯತಪ್ಪಿ ಫುಟ್‍ಪಾತ್‍ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿರುವ ಜೀವನ್ ಭೀಮಾನಗರ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike accident Accident Road accidents bengaluru


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ