ಪೆಪ್ಪರ್ ಸ್ಪ್ರೇ ಮಾಡಿ 10 ಲಕ್ಷ ರೂ ದೋಚಿ ಪರಾರಿ

10 lac  rupees stolen using pepper spray

06-07-2019

ಬೆಂಗಳೂರು: ಸಿಗರೇಟ್ ವರ್ತಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಆತನ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಸುಮಾರು 10 ಲಕ್ಷ ರೂ. ಗಳನ್ನು ದೋಚಿ ಪರಾರಿಯಾಗಿರುವ ಕೃತ್ಯ  ಚಿಕ್ಕಬಳ್ಳಾಪುರದ  ನಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಐಟಿಸಿ ಸಿಗರೇಟ್ ಮಾರುವ ಚಂದ್ರಹಾಸ ಎಂಬುವವರು ಸಿಗರೇಟ್ ಮಾರಿದ ಹಣವನ್ನು ತೆಗೆದುಕೊಂಡು ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಸಿಗರೇಟ್ ಕಂಪನಿ ವಾಹನದಲ್ಲಿ ಶುಕ್ರವಾರ ಸಂಜೆ 5ರ ವೇಳೆ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಮಡಕುಹೊಸಳ್ಳಿ ಬಳಿ ಇಬ್ಬರು ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಬಂದು ವಾಹನವನ್ನು ಅಡ್ಡಗಟ್ಟಿ ಚಂದ್ರಹಾಸನ್ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 10 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿರುವ ನಂದಿ ಪೊಲೀಸ್ ಠಾಣೆ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Crime RObbery Pepper spray Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ