IMA ಹಗರಣ ಸಂಬಂಧ ಎಸಿ ನಾಗರಾಜ್ ನ್ಯಾಯಾಲಯಕ್ಕೆ ಹಾಜರು

AC Nagaraj submitted to court in relation with IMA scam

06-07-2019

ಬೆಂಗಳೂರು,ಜು.6-ಬಹುಕೋಟಿ ಐಎಂಎ ಸಮೂಹ ಸಂಸ್ಥೆಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧಿಸಿದ ಕಂದಾಯ ಇಲಾಖೆಯ ಉತ್ತರ ವಿಭಾಗದ ಸಹಾಯಕ ಆಯುಕ್ತ(ಎಸಿ) ನಾಗರಾಜ್ ಅವರನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಐಎಂಎ ಸಮೂಹ ಸಂಸ್ಥೆಗೆ ನಿರಪೇಕ್ಷಣಾ ಪತ್ರ (ಎನ್‍ಓಸಿ)ನೀಡಲು 4.5 ಕೋಟಿ ಲಂಚ ಪಡೆದಿದ್ದ ಆರೋಪದ ಮೇಲೆ ಸಹಾಯಕ ಆಯುಕ್ತ ಎ.ಸಿ.ನಾಗರಾಜ್ ಬಂಧಿಸಿದ್ದ ಅಧಿಕಾರಿಗಳು ವಿಚಾರಣೆ ನಡೆಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಎಸ್‍ಐಟಿ ತನಿಖೆ ನಡೆಸುವಾಗಲೂ ತಪ್ಪು ಮಾಹಿತಿ ನೀಡಿ ನಾಗರಾಜ್ ಸರ್ಕಾರಕ್ಕೆ ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ.ಸರ್ಕಾರದಿಂದ ಎನ್‍ಓಸಿ ನೀಡುವ ಮೊದಲು 10 ಕೋಟಿ ರೂ. ಕೇಳಿದ್ದು, ಸಚಿವರೊಬ್ಬರ ಆದೇಶದ ಮೇರೆಗೆ ಹಣ ಸ್ವೀಕರಿಸಿದ್ದ ನಾಗರಾಜ್ ಕುರಿತು ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಸಹ ಹೇಳಿಕೊಂಡಿದ್ದನು. ಹಣ ನೀಡಲು ತಡವಾಗಿತ್ತು ಎಂದು ವಿಡಿಯೋದಲ್ಲಿ ಮನ್ಸೂರ್ ಖಾನ್ ಹೇಳಿದ್ದಾನೆ.

ಐಎಂಎ ವಂಚನೆ ಪ್ರಕರಣದ ಕರಿತು ಎಸ್‍ಐಟಿ ತಂಡ ಈಗಾಗಲೇ ವಜ್ರ, ಚಿನ್ನ, ಬೆಳ್ಳಿ, ಸೇರಿದಂತೆ ಐಎಂಎನ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಐಎಂಎ ಒಡೆತನದ ಫ್ರಂಟ್ ಲೈನ್ ಫಾರ್ಮಸಿಯ ನೀಲಸಂದ್ರ ಹಾಗೂ ವಿಜಯನಗರದ ಔಷಧಿ ಮಳಿಗೆಗಳ ಮೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 60 ಸಾವಿರ ನಗದು ಹಾಗೂ 40 ಲಕ್ಷ ರೂ. ಮೌಲ್ಯದ ಔಷಧಿ ಹಾಗೂ ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

IMA IMA scam Mansoor khan AC Nagaraj


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ