ಈ ಬಾರಿ ಸರ್ಕಾರ ಉಳಿಸಲು ಡಿಕೆಶಿ ನಿರಾಸಕ್ತಿ..?!

DK Shivkumar

06-07-2019

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಇನ್ನೇನು ಬೀಳುವ ಹಂತದಲ್ಲಿದೆ. ಇಂದು ರಮೇಶ್ ಜಾರಕಿಕೊಳಿ  ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ 8 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಇನ್ನೂ ಕೆಲವರು ರಾಜೀನಾಮೆ ನೀಡಲು ನಿರ್ಧಸಿದ್ದಾರೆ.

ಕಳೆದ ಕೆಲ ಬಾರಿ ಸರ್ಕಾರಕ್ಕೆ ಕಂಟಕ ಎದುರಾಗಿದ್ದಾಗ ಅದನ್ನು ಸಮರ್ಥವಾಗಿ ಎದುರಿಸಿ, ನಿಭಾಯಿಸಿದವರು ಸಚಿವ ಡಿ ಕೆ ಶಿವಕುಮಾರ್. ಆದರೆ ಈ ಬಾರಿ ಸರ್ಕಾರ ಉಳಿಸುವಲ್ಲಿ ಡಿ.ಕೆ ಶಿವಕುಮಾರ್ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ನಿಷ್ಠಾವಂತ ರಾಜಕಾರಣಿ ಎನಿಸಿಕೊಂಡಿರುವ ಡಿಕೆಶಿ ಯವರನ್ನು ಬೇಕಾದಾಗ ಬಳಸಿಕೊಂಡು ಕೇವಲ ಮಂತ್ರಿಗಿರಿಯನ್ನು ಮಾತ್ರ ಕೊಟ್ಟಿರುವುದಕ್ಕೆ ಅಸಮಾಧಾನವಿದೆ ಎನ್ನಲಾಗಿದೆ. ಹಾಗಾಗಿಯೇ ಅವರು ಈ ಬಾರಿ ಸರ್ಕಾರ ಉಳಿಸುವ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೇ ನಿರಾಸಕ್ತಿ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

DK Shivkumar Minister Congress Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ