ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆ: ಬಜೆಟ್ ನಂತರ ಬೆಲೆ ಏರಿಕೆ ಬರೆ

fuel price hike union budget 2019

06-07-2019

ದೆಹಲಿ: 2019ರ ಕೇಂದ್ರ ಬಜೆಟ್ ಮಂಡನೆಯ ಮರುದಿನ ದೇಶದ ನಾಗರಿಕರು ಇಂಧನ ಬೆಲೆಯ ಏರಿಕೆಯ ಹೊರೆ ಹೊರಬೇಕಾಗಿದೆ. ನಿನ್ನೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಹನಗಳ ಇಂಧನಗಳ ಮೇಲಿನ ಅಬಕಾರಿ ಸುಂಕ ಮತ್ತು ಮೂಲಸೌಕರ್ಯ ಸೆಸ್ ಅನ್ನು ಏರಿಕೆ ಮಾಡಿದ್ದರು. ಇದರ ಫಲವಾಗಿ ಇಂದು ನಾಗರಿಕರು ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ದೇಶಾದ್ಯಂತ ಕನಿಷ್ಠ 2.04 ರೂ. ನಿಂದ 2.36 ರೂವರೆಗೆ ಮಹಾನಗರಗಳಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ದೆಹಲಿಯಲ್ಲಿ ನಿನ್ನೆ ಪೆಟ್ರೋಲ್ ಬೆಲೆ 70.51 ರೂ. ಆಗಿದ್ದರೆ, ಇಂದು 2.45 ರೂ. ಏರಿಕೆಯಾಗುವ ಮೂಲಕ 72.96 ರೂಪಾಯಿಗೆ ತಲುಪಿದೆ. ನಿನ್ನೆ 64.33 ರೂ. ಇದ್ದ ಡೀಸೆಲ್ ಬೆಲೆ, ಇಂದು  66.69 ರೂಪಾಯಿಗೆ ಏರಿಕೆಯಾಗಿದೆ.        

ಮುಂಬೈನಲ್ಲಿ ನಿನ್ನೆ ಪೆಟ್ರೋಲ್ ಬೆಲೆ 76.15 ರೂ. ಆಗಿದ್ದರೆ, ಇಂದು 2.42 ರೂ. ಏರಿಕೆಯಾಗುವ ಮೂಲಕ 78.57 ರೂಪಾಯಿಗೆ ತಲುಪಿದೆ. ನಿನ್ನೆ 66.69 ರೂ. ಇದ್ದ ಡೀಸೆಲ್ ಬೆಲೆ, ಇಂದು 67.40 ರೂಪಾಯಿಗೆ ಏರಿಕೆಯಾಗಿದೆ.  

ಕೊಲ್ಕೊತ್ತಾದಲ್ಲಿ ನಿನ್ನೆ ಪೆಟ್ರೋಲ್ ಬೆಲೆ 72.75 ರೂ. ಆಗಿದ್ದರೆ, ಇಂದು 2.4 ರೂ. ಏರಿಕೆಯಾಗುವ ಮೂಲಕ 75.15 ರೂಪಾಯಿಗೆ ತಲುಪಿದೆ. ನಿನ್ನೆ 66.23 ರೂ. ಇದ್ದ ಡೀಸೆಲ್ ಬೆಲೆ, ಇಂದು  68.59 ರೂಪಾಯಿಗೆ ಏರಿಕೆಯಾಗಿದೆ.  

ಅತಿಹೆಚ್ಚು ಬೆಲೆ ಏರಿಕೆಯ ಬಿಸಿಯನ್ನು ದಕ್ಷಿಣ ರಾಜ್ಯ ತಮಿಳುನಾಡು ಭರಿಸಬೇಕಿದೆ. ಚೆನ್ನೈನಲ್ಲಿ ನಿನ್ನೆ ಪೆಟ್ರೋಲ್ ಬೆಲೆ 72.75 ರೂ. ಆಗಿದ್ದರೆ, ಇಂದು 2.57 ರೂ. ಏರಿಕೆಯಾಗುವ ಮೂಲಕ 75.15 ರೂಪಾಯಿಗೆ ತಲುಪಿದೆ. ನಿನ್ನೆ 67.96 ರೂ. ಇದ್ದ ಡೀಸೆಲ್ ಬೆಲೆ, 2.52 ರೂ. ಏರಿಕೆಯಾಗುವ ಮೂಲಕ ಇಂದು 70.48 ರೂಪಾಯಿಗೆ ಏರಿಕೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

Union budget Union budget 2019 Fuel price hike Narendra Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ