5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗೆ ಚಾಲನೆ ನೀಡಲಾಗಿದೆ: ಪ್ರಧಾನಿ ಮೋದಿ

Our goal is to reach 5 trillion dollar economy: Narendra Modi

06-07-2019

ಲಖ್ನೋ: ಕೇಕ್ ಗಾತ್ರ ಮುಖ್ಯ ಎಂಬ ಹೇಳಿಕೆ ಇಂಗ್ಲಿಷ್‍ನಲ್ಲಿದೆ. ಅದರ ಅರ್ಥ ಕೇಕ್ ದೊಡ್ಡದಾಗಿದ್ದಷ್ಟು, ಜನರಿಗೆ ದೊಡ್ಡ ಹೋಳು ಸಿಗುತ್ತದೆ. ಅದೇ ರೀತಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ವಾರಾಣಸಿಯಲ್ಲಿ ಮಾತನಾಡಿದ ಅವರು, ನಿನ್ನೆ ನೀವು ಟಿವಿಯಲ್ಲಿ, ಇಂದು ಪತ್ರಿಕೆಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕೇಳಿದ್ದೀರಿ, ಓದಿದ್ದೀರಿ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಎಂದರೆ ಏನೆಂದು ನೀವು ಅರಿತುಕೊಳ್ಳುವುದು ಮುಖ್ಯ. ಇದು ಭಾರತೀಯರಿಗೆ ಹೇಗೆ ಸಂಪರ್ಕ ಹೊಂದಿದೆ ಎಂದ ಅವರು ಮೇಲಿನಂತೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಲಾಭ ಕುರಿತು ವಿವರಿಸಿದರು.

ಬಜೆಟ್‍ನಲ್ಲಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವುದಕ್ಕಾಗಿ ನಿರ್ದೇಶನ ನೀಡಿದ್ದೇವೆ ಮತ್ತು ಇದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಘೋಷಿಸಿದ್ದೇವೆ. ಮುಂದಿನ 10 ವರ್ಷಗಳ ದೂರದೃಷ್ಟಿಯ ಕುರಿತು ನಮ್ಮ ಭರವಸೆಯನ್ನು ಮುಂದಿಟ್ಟಿದ್ದೇವೆ. ಮುಂದಿನ 5 ವರ್ಷಗಳಲ್ಲಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುತ್ತೇವೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದರು.

ವಾರಾಣಸಿಯಲ್ಲಿ ಬಿಜೆಪಿ ಕಾರ್ಯಕರ್ತರ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೀರಿನ ಲಭ್ಯತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ವ್ಯರ್ಥ ಮಾಡಲಾಗುತ್ತಿದೆ ಮತ್ತು ಅಜಾಗರೂಕತೆಯಿಂದ ನೀರನ್ನು ಬಳಸುವುದರಿಂದ ದೊಡ್ಡ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ನೀರನ್ನು ಮನೆ ಅಥವಾ ನೀರಾವರಿಗೆ ಬಳಸುವ ವೇಳೆ ನೀರಿನ ಸೋರಿಕೆಯನ್ನು ನಾವು ತಡೆಗಟ್ಟಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Narendra Modi Union budget Union budget 2019 Indian Economy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ