ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಭಾಷೆ ಕಡ್ಡಾಯ ? ತೀವ್ರ ವಿರೋಧ

Kannada News

10-06-2017 240

ಕೋಲ್ಕತ್ತ:- ಜೂನ್ ತಿಂಗಳಲ್ಲಿ, ಸಾಮಾನ್ಯವಾಗಿ ಪಶ್ಚಿಮ ಬಂಗಾಳದ ದಾರ್ಜಲಿಂಗ್ ನಲ್ಲಿ  ಮುಂಗಾರಿ ನೊಂದಿಗೆ ಹಬ್ಬವನ್ನು ಆಚರಿಸುತ್ತಿರುತ್ತಾರೆ. ಆದರೆ ಈ ಬಾರಿಯು ಇದಕ್ಕೆ ತದ್ವಿರುದ್ಧವಾಗಿ ಭಾರೀ ಹೋರಾಟ ನಡೆಯಿತ್ತಿದೆ. ಇದಕ್ಕೆಲ್ಲ ಕಾರಣ, ಪಶ್ಚಿಮ ಬಂಗಾಳದ ವಿವಾದಿತ ಕಾನೂನು, ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಭಾಷೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಮತ್ತು ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಆದೇಶವನ್ನು ವಿರೋಧಿಸಿ,  ಹಲವಾರು ವರ್ಷಗಳಿಂದ ಪ್ರತ್ಯೇಕ ಗೂರ್ಖಾಲ್ಯಾಂಡ್ ಗೆ  ಪ್ರತಿಭಟಿಸುತ್ತಿರುವ ಗೂರ್ಖಾ ಜನಮುಕ್ತಿ ಮೋರ್ಚಾ ಅವರು ಬಂದ್ ಗೆ ಕರೆ ನೀಡಿದ್ದರು, ಪಶ್ಚಿಮ ಬಂಗಾಳ ಸರ್ಕಾರ ಇಲ್ಲಿನ ಜನರ ವಿರುದ್ಧ ನಡೆದುಕೊಳ್ಳುತ್ತಿದೆ, ಇವರ ಆದೇಶ ನ್ಯಾಯ ಸಮ್ಮತವಲ್ಲ ಎಂದಿದ್ದಾರೆ. ಇದನ್ನು ಬಲವಾಗಿ ವಿರೋಧಿಸುತ್ತಿರುವ ಜೆ.ಎಮ್.ಜೆ ಒತ್ತಾಯವಾಗಿ 986 ಶಾಲೆಗಳನ್ನು ಮುಚ್ಚಿಸಿದ್ದಾರೆ. ಜೆ.ಎಮ್.ಜೆ ನ ಮುಖ್ಯಸ್ಥರಾದ ಬಿಮಲ್ ಗುರುಂಗ್ ಅವರು ಸರ್ಕಾರದ ವಿರುದ್ಧ ಭಾರಿ ವಿರೋಧ ವ್ಯಕ್ತಪಡಿಸಿ  ಪ್ರತಿಭಟಿಸುತ್ತಿದ್ದಾರೆ. ಪಶ್ಚಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.               
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ