ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ

7.1 Earthquake Hits Southern California

06-07-2019

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನದ ತೀವ್ರತೆ 7.1 ರಷ್ಟು ದಾಖಲಾಗಿದೆ. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ಲಾಸ್ ಎಂಜಲಿಸ್ ನ ಈಶಾನ್ಯಕ್ಕೆ 202 ಕಿಲೋಮೀಟರ್ ದೂರದಲ್ಲಿರುವ ರಿಡ್ಜೆಕ್ರೆಸ್ಟ್ ನಗರದ ಸಮೀಪದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನ ಸಂಭವಿಸಿದೆ.

ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಆರಂಭದಲ್ಲಿ ಭೂಕಂಪವು 6.6 ತೀವ್ರತೆ ಇತ್ತು ಎಂದು ವರದಿಯಾಗಿದ್ದು, ಕೇವಲ 5.4 ಮೈಲಿಗಳ ಆಳದಲ್ಲಿ ಭೂಕಂಪದ ಕೇಂದ್ರವಿದೆ ಎನ್ನಲಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಉಂಟಾದ ಭೂಕಂಪನ ಹಲವಾರು ಸಣ್ಣ ಪಟ್ಟಣಗಳಲ್ಲೂ ತನ್ನ ಪ್ರಭಾವ ಬೀರಿದೆ. ಘಟನೆ ವರದಿಯಾದ ಕೂಡಲೇ, ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಟ್ವೀಟ್‌ನಲ್ಲಿ ಇದು ಅತಿದೊಡ್ಡ ಭೂಕಂಪ ಎಂದು ಹೇಳಿದೆ.

ಇನ್ನು, ಭೂಕಂಪನದಿಂದಾಗಿ ಹಲವಾರು ಕಟ್ಟಡಗಳು, ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.


ಸಂಬಂಧಿತ ಟ್ಯಾಗ್ಗಳು

Earthquake Firefighters California Los Angeles


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ