ಕೇಂದ್ರ ಬಜೆಟ್ ಅಭಿವೃದ್ಧಿ ವಿರೋಧಿ: ಸಿದ್ದರಾಮಯ್ಯ

Siddaramaiah Statement

06-07-2019

ಬೆಂಗಳೂರು: ಕೇಂದ್ರ ಬಜೆಟ್‍ನಿಂದ ಜನ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರು ಬೇಸರಪಟ್ಟುಕೊಂಡಿದ್ದಾರೆ. ಇದು (ಕೇಂದ್ರ ಬಜೆಟ್) ಅಭಿವೃದ್ಧಿ ವಿರೋಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ರೈತ ವಲಯವನ್ನು ಅಭಿವೃದ್ಧಿಗೊಳಿಸುವುದಾಗಿ ಅವರು (ಬಿಜೆಪಿ) ಭರವಸೆ ನೀಡಿದ್ದರು. ಆದರೆ, ಅದು ಇಂದಿಗೂ ಸುಳ್ಳಾಗಿಯೇ ಉಳಿದಿದೆ ಎಂದರು. ರೈತರು ಇದುವರೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಪಡೆಯುತ್ತಿಲ್ಲ. ಅವರು ದುಃಸ್ಥಿತಿಯಲ್ಲಿದ್ದಾರೆ. ಬಜೆಟ್‍ನಲ್ಲಿ ರೈತರ ಪರವಾದ ಯಾವುದೇ ವಿಷಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಲು ಬಜೆಟ್‍ನಲ್ಲಿ ಯಾವುದೇ ಯೋಜನೆ ಇಲ್ಲ. ಈಗ ನಿರುದ್ಯೋಗದ ಪ್ರಮಾಣ 45 ವರ್ಷಗಳ ಹಿಂದೆ ಇದ್ದಷ್ಟು ಪ್ರಮಾಣದಲ್ಲಿದೆ ಎಂದ ಅವರು, ನಿರ್ಮಲಾ ಸೀತಾರಾಮನ್ ಅವರು ಮಹಿಳೆ. ಆದ್ದರಿಂದ ದೇಶದ ಮಹಿಳೆಯರು ಅವರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Budget 2019 Agriculture Siddaramaiah Nirmala Sitaraman


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ