ಗುಜರಾತ್ ರಾಜ್ಯಸಭೆ ಚುನಾವಣೆ: ಕೈ ಶಾಸಕರಿಂದ ಅಡ್ಡ ಮತದಾನ!

Alpesh Thakor

05-07-2019

ಅಹಮದಾಬಾದ್: ಗುಜರಾತ್‍ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಧವಲ್ ಸಿನ್ಹಾ ಝಲ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ವೀಕ್ಷಕ ಅಶ್ವಿನ್ ಕೊಟ್ವಾಲ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್‍ನ ಬಂಡಾಯ ಶಾಸಕ ಅಲ್ಪೇಶ್ ಠಾಕೂರ್, ನಾನು ಅಂತರಾತ್ಮದ ಮಾತು ಕೇಳಿ ಮತದಾನ ಮಾಡಿದ್ದೇನೆ ಮತ್ತು ರಾಷ್ಟ್ರೀಯ ನಾಯಕತ್ವದ ಕುರಿತು ಧ್ಯಾನವಿರಿಸಿ ಮತದಾನ ಮಾಡಿದ್ದೇನೆ ಎಂದರು. ಯಾವ ಪಕ್ಷ ಜನರಿಂದ ದೂರಾಗಿದೆಯೋ, ಯಾವ ಪಕ್ಷ ನಮಗೆ ದ್ರೋಹ ಮಾಡಿದೆಯೋ ಅದನ್ನು ಮನಸಿನಲ್ಲಿಟ್ಟುಕೊಂಡು ಮತ ಚಲಾಯಿಸಿದ್ದೇನೆ ಎಂದ ಅವರು, ನಾನು ರಾಹುಲ್ ಗಾಂಧಿಯವರಲ್ಲಿ ವಿಶ್ವಾಸವಿರಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೆ. ಆದರೆ, ದುರಾದೃಷ್ಟವಶಾತ್ ಅವರು ನಮಗೆ ಏನನ್ನೂ ಮಾಡಲಿಲ್ಲ. ನಮ್ಮನ್ನು ನಿರಂತರವಾಗಿ ಅವಮಾನಿಸಲಾಯಿತು. ಆದ್ದರಿಂದ ನಾನು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ವೇಳೆ, ಗುಜರಾತ್‍ನ ರಾಧಾಪುರ್ ಕ್ಷೇತ್ರದಿಂದ ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಿಸಿದ್ದರು.

ಇನ್ನು ಇನ್ನೊಬ್ಬ ಬಂಡಾಯ ಶಾಸಕ ಧವಳ್ ಸಿನ್ಹ ಝಲಾ ಕೂಡ ಮತದಾನದ ಕುರಿತು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ನಮಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. ನಾಯಕರು ಕಿರಿಯ ಕಾರ್ಯಕರ್ತರ ಮಾತುಗಳನ್ನ ಕೇಳಿಸಿಕೊಳ್ಳುತ್ತಿಲ್ಲ. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

Alpesh Thakor Congress Gujarath MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ