ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

Cow Rescue

05-07-2019

ಬೆಂಗಳೂರು: ಚನ್ನಪಟ್ಟಣದ ಸುಣ್ಣಘಟ್ಟ ಬಳಿ ಇಂದು ಬೆಳಿಗ್ಗೆ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಸ್ಥಳೀಯರೇ ರಕ್ಷಿಸಿ ಇಬ್ಬರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಸ್ಥಳಿಯರು ಹಿಡಿದುಕೊಟ್ಟ ಅಲೀಮ್ ಹಾಗೂ ಅಬ್ಬಾಸ್‍ನನ್ನು ಬಂಧಿಸಿರುವ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪರಾರಿಯಾಗಿರುವ ಟೆಂಪೋ ಚಾಲಕ ಅಯಾಜ್‍ಗಾಗಿ ಶೋಧ ನಡೆಸಿದ್ದಾರೆ.

ಚನ್ನಪಟ್ಟಣದ ಸಾತನೂರು-ಹಲಗೂರು ರಸ್ತೆಯಲ್ಲಿ ನಿನ್ನೆ  ಟೆಂಪೋದಲ್ಲಿ ಟೆಂಪೋದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮಾಹಿತಿ ತಿಳಿದು ಸುಣ್ಣಘಟ್ಟದ ಗ್ರಾಮಸ್ಥರು ವಾಹನವನ್ನು ತಡೆದು ನಿಲ್ಲಿಸಿ ಟೆಂಪೋ ಒಳಗೆ ನೋಡಿದಾಗ 20ಕ್ಕೂ ಹೆಚ್ಚು ಗೋವುಗಳನ್ನು ಹಗ್ಗಗಳಿಂದ ಕಟ್ಟಿ, ಚೀಲದಲ್ಲಿ ಕಟ್ಟಿ ಹಾಕಿದ್ದು ಕಂಡುಬಂದಿದೆ.

ಕೂಡಲೇ ಟೆಂಪೋದಲ್ಲಿದ್ದವರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಯಾವುದಕ್ಕೂ ಉತ್ತರಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಗೋವುಗಳನ್ನು ಕೇರಳಕ್ಕೆ ಕಸಾಯಿಖಾನೆಗೆ ಸಾಗಿಸುತ್ತಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ರಕ್ಷಿಸಿದ ಗೋವುಗಳನ್ನು ರಾಮನಗರದಲ್ಲಿನ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Cow Chennapattana Rescue Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ