ಪಂಚಗವ್ಯ ಕುರಿತು ವೈಜ್ಞಾನಿಕ ಸಂಶೋಧನೆ !

Kannada News

10-06-2017

ಬೀಜಿಂಗ್ :- ಭಾರತದಲ್ಲಿ ಗೋವುಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕೇಂದ್ರದ ಪರಿಸರ ಖಾತೆ ಸಚಿವ ಹರ್ಷವರ್ಧನ್ ಅವರು ಪಂಚಗವ್ಯ ವನ್ನು ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಪಂಚಗವ್ಯ ಎಂದರೆ ಹಸುವಿನ ಸಗಣಿ, ಗೋ ಮೂತ್ರ, ಹಸುವಿನ ಹಾಲು, ಮೊಸರು,ಬೆಣ್ಣೆ ಇವುಗಳ ಮಿಶ್ರಣವಾಗಿದೆ. ಇವುಗಳನ್ನು ಭಾರತೀಯ ಪುರಾತನ ಆಚರಣೆಗಳಲ್ಲಿ ಉಪಯೋಗಿಸುತ್ತಿದ್ದರು. ಚೀನಾದ ಬೀಜಿಂಗ್ ನಲ್ಲಿ ಅಂತರಾಷ್ಟ್ರೀಯ ಕ್ಲೀನ್ ಎನರ್ಜಿ  ಸಚಿವರ ಸಭೆಯಲ್ಲಿ ಮಾತನಾಡಿದ ಅವರು ಹಸುವಿನ ಹಾಲು ಮತ್ತು ಗೋಮೂತ್ರ ದಲ್ಲಿನ ಹಲವು ಮಹತ್ವ ಉಪಯೋಗಗಳ ಬಗ್ಗೆ ಇರುವ ವಿವಾದಗಳಿಗೆ, ವೈಜ್ಞಾನಿಕ ಸಂಶೋಧನೆಗಳ ಮೂಲಕ ಬಗೆಹರಿಸಲಿದ್ದೇವೆ ಎಂದು ತಿಳಿಸಿದರು. ಆಯುರ್ವೇದದಿಂದ ನೂನಾರು ವರ್ಷಗಳು ಸರಾಗವಾಗಿ ಬದುಕಬಹುದು. ಆದರೆ, ಅದನ್ನು ವೈಜ್ಞಾನಿಕವಾಗಿ ಜಗತ್ತಿಗೆ ತೋರಿಸಬೇಕಾಗಿದೆ ಎಂದರು. ಮತ್ತು ಆಯುರ್ವೇದಕ್ಕೆ ಸಂಬಂಧಿಸಿದಂತೆ ಭಾರತದ ಜಮ್ಮುವಿನಲ್ಲಿ ಪ್ರಯೋಗಾಲಯಗಳಿವೆ ಮತ್ತು ಆಯುಷ್ ಇಲಾಖೆಯನ್ನು 5000 ಕೋಟಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ ಅಲ್ಲದೇ ಇವುಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ