ಕುಡಿದ ಮತ್ತಿನಲ್ಲಿ ಕಟ್ಟಡದಿಂದ ಬಿದ್ದು ಸಾವು

Man falls of the building due to over drunk

04-07-2019

ಬೆಂಗಳೂರು: ಆಡುಗೋಡಿಯ ರಾಜೇಂದ್ರ ನಗರದಲ್ಲಿ ಬುಧವಾರ ಮಧ್ಯರಾತ್ರಿ  ಕುಡಿದ ಅಮಲಿನಲ್ಲಿದ್ದ ಹೊಟೇಲ್ ಕಾರ್ಮಿಕನೊಬ್ಬ ಸ್ನೇಹಿತನ ಮನೆಯ ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮಣಿಪುರಂ ಮೂಲದ ಚುನ್ನಿತಾಮ್ (28)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಕೋರಮಂಗಲದ ಹೊಟೇಲ್‍ವೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಾಮ್, ಆಡುಗೋಡಿಯ ಭಾವನ ಮನೆಯಲ್ಲಿ ವಾಸವಾಗಿದ್ದ. 
ನಿನ್ನೆರಾತ್ರಿ 12ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗದೆ ರಾಜೇಂದ್ರ ನಗರದಲ್ಲಿದ್ದ ಸ್ನೇಹಿತನ ಮನೆಗೆ ಹೋಗಿದ್ದ ತಾಮ್ ಅಲ್ಲಿ ಸ್ನೇಹಿತನ ಜೊತೆ ಸೇರಿ ಕಂಠಮಟ್ಟ ಕುಡಿದು ಹೊರಗಡೆ ಬಂದಿದ್ದು, ಎರಡನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. 
ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ಆಡುಗೋಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Alcoholism Accident Death Drunk


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ