ಅಲಂಕಾರಿಕಾ ಆಭರಣಗಳ ಮಾರಾಟ ಮಳಿಗೆಗೆ ಬೆಂಕಿ

Fire

04-07-2019

ಬೆಂಗಳೂರು: ರಾಮಮೂರ್ತಿ ನಗರದ ಸಮೀಪ ಅಲಂಕಾರಿಕಾ ಆಭರಣಗಳ ಮಾರಾಟ ಮಳಿಗೆಗೆ ಇಂದು ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಕಸ್ತೂರಿನಗರದ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರ ಮೂರನೇ ಮಹಡಿಯಲ್ಲಿದ್ದ ಅಲಂಕಾರಿಕಾ ಆಭರಣಗಳ ಅಂಗಡಿಗೆ ಬೆಳಿಗ್ಗೆ 7ರ ಸುಮಾರಿನಲ್ಲಿ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಇಡೀ ಅಂಗಡಿ ಆವರಿಸಿ, ಬೆಂಕಿ ಹೊರಬರಲಾರಂಭಿಸಿದೆ. ಬೆಂಕಿಯನ್ನು ನೋಡಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ, ಸತತ ಮೂರು ಗಂಟೆ ಶ್ರಮಿಸಿ ಬೆಂಕಿ ನಂದಿಸಿವೆ.

ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಅಲಂಕಾರಿಕಾ ಆಭರಣಗಳು, ಕೃತಕ ಆಭರಣಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ರಾಮಮೂರ್ತಿ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fire Bengaluru Jewels Ramamurthi Nagar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ