ಚಿನ್ನದ ಸರಕ್ಕಾಗಿ ಮಹಿಳೆಯ ಕೊಲೆ

Murder

04-07-2019

ಬೆಂಗಳೂರು: ಚಿನ್ನದ ಸರಕ್ಕಾಗಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕಗ್ಗಲಿಪುರದ ಬಳಿ ನಡೆದಿದೆ. ಕಗ್ಗಲಿಪುರದ ಲಕ್ಷ್ಮಿಪುರದಲ್ಲಿನ ಗಾಯಿತ್ರಿ (29)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ, ಬುಧವಾರ ಬೆಳಿಗ್ಗೆ ಮನೆಯಿಂದ ಹತ್ತಿರದಲ್ಲಿದ್ದ ಶಾಲೆಗೆ ಮಕ್ಕಳನ್ನು ಬಿಟ್ಟು ಬಂದು ಗಾಯಿತ್ರಿ ಒಂಟಿಯಾಗಿದ್ದರು.

ಮನೆಯಲ್ಲಿ ಗಾಯಿತ್ರಿ ಒಂಟಿಯಾಗಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಗಿಲು ಬಡಿದಿದ್ದು ಬಾಗಿಲು ತೆಗೆದ ಕೂಡಲೇ ಒಳನುಗ್ಗಿ ಮಾಂಗಲ್ಯಸರಕ್ಕೆ ಕೈ ಹಾಕಿದ್ದಾರೆ ಮಹಿಳೆಯು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ರಕ್ಷಣೆಗಾಗಿ ಕೂಗಿಕೊಂಡಾಗ ಚಾಕುವಿನಿಂದ ಕತ್ತು ಕೊಯ್ದು ಸರ ದೋಚಿ ಪರಾರಿಯಾಗಿದ್ದಾರೆ.

ಚಾಕು ಆಳವಾಗಿ ಕುತ್ತಿಗೆಗೆ ಇಳಿದಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಗಾಯಿತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಕ್ಕಳು ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಗ್ಗಲಿಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ರಾಮನಗರ ಎಸ್‍ಪಿ ಚೇತನ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chain snatching Kaggalipura Crime Murder


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ