ಮೋದಿ ಸರ್ಕಾರದಿಂದ ರಾಮ ಮಂದಿರ ನಿರ್ಮಾಣ ಸ್ವಾಭಾವಿಕ ಆಕಾಂಕ್ಷೆ !

Kannada News

10-06-2017

ನವದೆಹಲಿ: ಒಂದು ವರ್ಷದಲ್ಲಿ ರಾಮ ಮಂದಿರ ವಿಚಾರವಾಗಿ, ಎಲ್ಲವನ್ನು ಸಂಪೂರ್ಣ ಪೂರ್ಣಗೊಳಿಸಿ ಎಂದು ವಿಶ್ವ ಹಿಂದು ಪರಿಷತ್ತಿನ ಅಂತರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಆಗ್ರಹಿಸಿದ್ದಾರೆ. ಖಾಸಗಿ ಚಾನಲ್ ನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಮ ಮಂದಿರ ನಿರ್ಮಾಣದ ಕಾನೂನುಗಳು, ನಿಧಾನಗತಿಯಲ್ಲಿವೆ ಎಂದು ಜನರಿಗೆ ಅನ್ನಿಸಬಹುದು ಆದರೆ ನಮ್ಮ ಪ್ರಕಾರ ಯಾವುದೇ ವಿಳಂಬ ಇಲ್ಲ ಎಂದಿದ್ದಾರೆ, ಅಲ್ಲದೇ ಮೋದಿ ಸರ್ಕಾರದಿಂದ ರಾಮ ಮಂದಿರ ನಿರ್ಮಾಣ ಜನರ ಸ್ವಾಭಾವಿಕವಾದ ಆಕಾಂಕ್ಷೆ, ಅದು ಬಿಜೆಪಿ ಸರ್ಕಾರದ ಭರವಸೆಯು ಆಗಿದೆ, ಆದರೆ ಈ ವಿಚಾರದಲ್ಲಿ ಧನಾತ್ಮಕ ಕಾರ್ಯಗಳು ಕಂಡು ಬರದಿದ್ದಲ್ಲಿ ಅಸಮಾಧಾನಗಳು ಬರುವುದು ಖಂಡಿತ ಎಂದಿದ್ದಾರೆ. ರಾಮ ಮಂದಿರ ನಿರ್ಮಾಣದಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದರು.  ಮೋದಿಯವರ ಭರವಸೆಗಳು ಈಡೇರಿಸುವ ಕಾರ್ಯದಲ್ಲಿ ವಿಳಂಬವಾಗುತ್ತಿರುವುದು ನಿಜ, ಇದರಿಂದ ಎಲ್ಲರೂ ಮಾತನಾಡುವಂತಾಗಿದೆ, ಸರ್ಕಾರದ ಮೂರು ವರ್ಷಗಳು ಕಳೆದುಹೋಗಿವೆ, ಇನ್ನೂ ಎರಡು ವರ್ಷಗಳು ಉಳಿದಿವೆ, ಆದ್ದರಿಂದ ಭರವಸೆಗಳನ್ನು ಈಡೇರಿಸಲು ಸಾಕಷ್ಟು ಸಮಯವಿದೆ ಎಂದರು. ರೈತರ ವಿಚಾರವಾಗಿ ಮಾತನಾಡಿದ ಅವರು ಎಮ್.ಎಸ್ ಸ್ವಾಮಿನಾಥನ್ ಅವರ ವರದಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದರು. ಮತ್ತು ಬಿಜೆಪಿಯ ಮತದಾರರಿಗೆ ರಾಮ ಮಂದಿರ ಬೇಕು, ಏಕ ರೂಪ ನಾಗರೀಕ ಸಂಹಿತೆ ಬೇಕು, ಬಾಂಗ್ಲಾದೇಶಿಯರು ಭಾರತದೊಳಗೆ ಒಳನುಸುಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇವೆಲ್ಲದರ ಬಗ್ಗೆ ಮೋದಿ ಸರ್ಕಾರಕ್ಕೆ ಗೊತ್ತಿದೆ ಅವರು ಈ ಪ್ರಮುಖವಾದ ವಿಚಾರಗಳಲ್ಲಿ ಸೂಕ್ತ ಮತ್ತು ಸರಿಯಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ