ನಾಳೆ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ

Finance Minister Nirmala Sitharaman to present maiden Budget tomorrow

04-07-2019

ನವದೆಹಲಿ: ಭರ್ಜರಿ ಬಹುಮತದೊಂದಿಗೆ ಎರಡನೆ ಬಾರಿ ಅಧಿಕಾರ ಗದ್ದುಗೆಗೆ ಏರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಜೆಟ್-2019 ನಾಳೆ ಮಂಡನೆಯಾಗಲಿದೆ ಇದು, ಅಪಾರ ನಿರೀಕ್ಷೆ ಮತ್ತು ಕುತೂಹಲ ಕೆರಳಿಸಿದೆ.

ದೇಶದ ಪ್ರಪ್ರಥಮ ವಾಣಿಜ್ಯ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ನಾಳೆ ಬೆಳಗ್ಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಪ್ರಸ್ತುತ ಆರ್ಥಿಕ ಹಿನ್ನೆಡೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು , ನಿರ್ಮಲಾ ಸೀತಾರಾಮನ್ ಅವರ ಮುಂದೆ ಸಾಕಷ್ಟು ಸವಾಲುಗಳು ಇವೆ. ನಾಳಿನ ಬಜೆಟ್ ಮಂಡನೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ನಿರಾಳವಾಗಿರುವ ಪ್ರಮುಖ ಸಂಗಂತಿಯೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಮನಾರ್ಹವಾಗಿ ಇಳಿಮುಖವಾಗಿದೆ.

ಇದು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲೆ ಯಾವುದೇ ಹೆಚ್ಚಿನ ಹೊರೆ ಹೊರುವ ಅನಿವಾರ್ಯತೆ ಕೇಂದ್ರದ ಮೇಲೆ ಬೀಳದಂತೆ ಮಾಡಿರುವುದು ಮೋದಿ ಸರ್ಕಾರಕ್ಕೆ ಒಂದು ರೀತಿ ವರದಾನವಾಗಿದೆ.

ಈ ವರ್ಷದಲ್ಲಿ ಇದು ಮೋದಿ ಸರ್ಕಾರದ ಎರಡನೆ ಬಜೆಟ್. ಲೋಕಸಭಾ ಚುನಾವಣೆಗೂ ಮುನ್ನ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಫೆ.1ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಇದು ಮತದಾರರನ್ನು ಓಲೈಸುವ ಉದ್ದೇಶದ ಬಜೆಟ್ ಆಗಿತ್ತು. ಈಗ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಪರಿಪೂರ್ಣ ಪ್ರಮಾಣದ್ದಾಗಿದ್ದು , ಇದು ಜನಪ್ರಿಯ ಬಜೆಟ್‍ಗಿಂತ ವಾಸ್ತವದ ಮುಂಗಡ ಪತ್ರವಾಗಲಿದೆ. ನಿರೀಕ್ಷೆಯಂತೆ ಈ ಬಜೆಟ್‍ನಲ್ಲಿ ಹೂಡಿಕೆ ಮತ್ತು ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಯೋಜನೆಗಳು ಸಹ ಮಂಡನೆಯಾಗುವ ನಿರೀಕ್ಷೆ ಇದ್ದು ಜನಸಾಮಾನ್ಯರು ಆಯವ್ಯಯದ ಬಗ್ಗೆ ಭಾರೀ ಪ್ರತೀಕ್ಷೆ ಹೊಂದಿದ್ದಾರೆ.

ಆರ್ಥಿಕ ಹಿನ್ನೆಡೆಯ ಪ್ರಭಾವದಿಂದ ಭಾರತೀಯ ಆರ್ಥಿಕ ಪ್ರಗತಿಯ ಮೇಲೂ ಪರಿಣಾಮ ಉಂಟಾಗಿದ್ದು, ಪ್ರಸ್ತುತ ಶೇ.6.8ರಷ್ಟಿದೆ. ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿ ದಾರಿಗೆ ತಂದು ಬೆಳವಣಿಗೆ ಸಾಧಿಸಬೇಕಾದ ದೊಡ್ಡ ಜವಾಬ್ದಾರಿ ಎನ್‍ಡಿಎ ಸರ್ಕಾರದ ಮೇಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿ ಹೊಂದಲಾಗಿದ್ದರೂ ಈ ಹಾದಿ ಕಠಿಣವಾಗಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಹತ್ತು ಹಲವು ಸವಾಲುಗಳನ್ನು ಸರಿದೂಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದು ಒಂದು ರೀತಿಯಲ್ಲಿ ಹೂಡಿಕೆ ಮತ್ತು ಬೇಡಿಕೆ ಆದ್ಯತೆಯ ಬಜೆಟ್ ಆಗುವ ನಿರೀಕ್ಷೆ ಇದೆ.


ಸಂಬಂಧಿತ ಟ್ಯಾಗ್ಗಳು

Nirmala Sitaraman NDA Budget PM Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ