ಸದ್ಯಕ್ಕೆ ದೋಸ್ತಿ ಸರ್ಕಾರ ಸೇಫ್..?

Karnataka Government

04-07-2019

ಬೆಂಗಳೂರು:  ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಸಹ ವಿರೋಧ ಪಕ್ಷ ಬಿಜೆಪಿಯೊಡನೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಮತ್ತು ಜೆ ಡಿ ಎಸ್ ಶಾಸಕರ ಒಂದು ಗುಂಪು ಇನ್ನೂ ಕಾದು ನೋಡುವ ತಂತ್ರವನ್ನೇ ಮುಂದುವರಿಸಿದೆ.

ಬಿಜೆಪಿ ಮೂಲಗಳ ಪ್ರಕಾರ, ರಾಯಚೂರು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತು ಮೈಸೂರು ಹಾಗೂ ಮಂಡ್ಯದ ತಲಾ ಒಬ್ಬ ಜೆಡಿ ಎಸ್ ಶಾಸಕರು ಈಗ ಪಕ್ಷ ತೊರೆದು ಬಿಜೆಪಿ ಸೇರುವ ಇರಾದೆಯಲ್ಲಿದ್ದಾರೆ. ಈ ಶಾಸಕರು ಪ್ರಸ್ತುತ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಆದಾಗ್ಯೂ, ಅವರು ತಮ್ಮ ನಿರ್ಧಾರವನ್ನು ಅನುಷ್ಠಾನಗೊಳಿಸಲು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ದಡ್ಡಲ್ ಬಸವನಗೌಡ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಸಲ್ಲಿಸುತ್ತಿರುವ 14ನೇ ವ್ಯಕ್ತಿ ತಾವೆಂದು ತಿಳಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನಿಂದ 13 ಶಾಸಕರು ನಿರ್ಗಮಿಸಿದರೆ ಮಾತ್ರ ತಾವು ರಾಜೀನಾಮೆ ಸಲ್ಲಿಸುತ್ತೇವೆ ಇದರರ್ಥವಾಗಿದೆ.

ಯಾವುದೇ ಫಲವಿಲ್ಲದೆ ರಾಜೀನಾಮೆ ಸಲ್ಲಿಸಲಾರೆ ಎಂದು ಅವರು ಬಿಜೆಪಿ ನಾಯಕರಿಗೆ ಕಳಿಸಿದ ಸಂದೇಶ ರವಾನಿಸಿದ್ದಾರೆ. 13 ಶಾಸಕರು ರಾಜೀನಾಮೆ ನೀಡಿದರೆ ನಾವು ಕೂಡ ರಾಜೀನಾಮೆ ನೀಡಲಿದ್ದು, ಈ ಪೈಕಿ ನಾವು 14ನೇಯವರಾಗಿ ರಾಜೀನಾಮೆ ಸಲ್ಲಿಸಲಿದ್ದೇನೆಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

Government JDS BJP Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ