ಕರವಸ್ತ್ರ ಮಾರುತಿದ್ದವ IMA ಹಗರಣದ ಮುಖ್ಯ ಪಾತ್ರಧಾರಿ

man who was selling tea is behind IMA scam

03-07-2019

ಬೆಂಗಳೂರು- ಐಎಂಎ ಕಂಪನಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಬಿಬಿಎಂಪಿಯ ನಾಮನಿರ್ದೇಶಿತ ಸದಸ್ಯ ಮುಜಾಹಿದೀನ್ ಹಿಂದೆ ಭದ್ರಾವತಿಯಲ್ಲಿ ಕರವಸ್ತ್ರ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳ ತನಿಖೆಯಲ್ಲಿ ಭದ್ರಾವತಿಯಲ್ಲಿ ಕರ್ಚೀಫ್ ಮಾರಾಟ ಮಾಡುತ್ತಿದ್ದ 2001-02ರಲ್ಲಿ ನಗರಕ್ಕೆ ಬಂದು ಪ್ರೇಜರ್ ಟೌನ್ ಬಳಿಯ ಸೆಪ್ಪಿಂಗ್ಸ್ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವುದು ಕಂಡುಬಂದಿದೆ.
ಅಂಗಡಿಗೆ ಬರುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳ ಪರಿಚಯ ಮಾಡಿಕೊಂಡು ತಾನು ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದನು.
ಎಸ್ಟೇಟ್ ವ್ಯವಹಾರ ಬೆಳೆದಂತೆ ರಾಜಕಾರಣಿಗಳ ಸಂಪರ್ಕಗಳಿಸಿ 2010ರ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಕಾಂಗ್ರೆಸ್ ಶಕೀಲ್ ಅಹಮದ್ ಎದುರು ಸೋತಿದ್ದ  ಮುಜಾಹಿದೀನ್ ಚುನಾವಣೆಯ ನಂತರ ಮನ್ಸೂರ್ ಖಾನ್ ಜೊತೆ ನಂಟು ಬೆಳೆಸಿ ತನಗೆ ಪರಿಚಯವಿದ್ದ ದೊಡ್ಡ ದೊಡ್ಡ ನಾಯಕರು, ಉದ್ಯಮಿಗಳ ಮೂಲಕ ಐಎಂಎಗೆ ಹಣ ಹಾಕಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ರಿಯಲ್ ಎಸ್ಟೇಟ್ ಮಾಡುತ್ತಿದ್ದ ವೇಳೆ ಸುಲಿಗೆ, ಧಮ್ಕಿ ಹಾಕಿ ಹಣ ವಸೂಲಿ, ಭೂಮಿ ಕಬಳಿಕೆ ಪ್ರಕರಣಗಳಿಂದ ಪುಲಕೇಶಿನಗರ ಪೊಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿದ್ದ ಮುಜಾಹಿದೀನ್ ಬಡವರ ಜಮೀನುಗಳ ಕಬಳಿಕೆ ಪ್ರಕರಣದಲ್ಲಿ  ಬಾಣಸವಾಡಿ, ಹೆಣ್ಣೂರು, ಭಾರತಿನಗರ, ಶಿವಾಜಿನಗರ, ಪುಲಿಕೇಶಿನಗರ ಠಾಣೆಯಲ್ಲಿ ಕೇಸ್‍ಗಳು ದಾಖಲಾಗಿವೆ.
ಪೊಲೀಸ್ ಠಾಣೆಯಲ್ಲಿ  ಗನ್ ತೋರಿಸಿ ಪೊಲೀಸರಿಗೆ ಬೆದರಿಕೆ ಹಾಕಿ ಜೈಲು ಕೂಡ ಸೇರಿದ್ದ ಆತ ನಂತರ ಸುಧಾರಣೆಯಾಗಿ ಅಪರಾಧ ಕೃತ್ಯಗಳಿಂದ ದೂರ ಉಳಿದಿದ್ದು ಇತ್ತೀಚಿಗಷ್ಟೇ ಆತನನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿತ್ತು.ಈಗಾಗಲೇ ಎಸ್.ಐ.ಟಿ ತನಿಖೆ ವೇಳೆ ಮುಜಾಹಿದೀನ್ ಕೋಟಿ ಕೋಟಿ ಆಸ್ತಿ ಗಳಿಸಿರುವುದು ಹಾಗೆ 100 ಬ್ಯಾಂಕ್ ಖಾತೆಗಳು ಹೊಂದಿರುವುದು ಪತ್ತೆಯಾಗಿದೆ.
ಮನ್ಸೂರ್ ಖಾನ್ ಪರಾರಿಯಾಗುವ ಮುನ್ನ ಜೂನ್ 6 ರಿಂದ 8ರವರೆಗೆ ಮನ್ಸೂರು ಜೊತೆ ಹಾಗೂ ಇಬ್ಬರು ಸಚಿವರ ಜೊತೆ 27 ಬಾರಿ ಕರೆಮಾಡಿ ಮಾತಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.


ಸಂಬಂಧಿತ ಟ್ಯಾಗ್ಗಳು

IMA Mohammed mansoor khan IMA scam Mujahideen


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ