ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದವರಲ್ಲಿ 4 ಮೃತದೇಹ ಪತ್ತೆ

bodies of 4 climbers who got killed in an avalanche found

03-07-2019

ದೇಶದ ಎರಡನೇ ಅತಿ ಎತ್ತರದ ಪರ್ವತ ನಂದಾ ದೇವಿಯನ್ನು ಹತ್ತಲು  ಹೋಗಿ ಹಿಮಪಾತಕ್ಕೆ ಸಿಲುಕಿದ 8 ಜನರ ಪೈಕಿ 4 ಜನರ ಮೃತದೇಹವನ್ನು ಪತ್ತೆಹಚ್ಚಲಾಗಿದೆ.  ಮೃತಪಟ್ಟ 8 ಜನರ ತಂಡದಲ್ಲಿ 4 ಬ್ರಿಟಿಷ್, 2 ಅಮೇರಿಕನ್, ಒಬ್ಬ ಆಸ್ಟ್ರೇಲಿಯನ್ ಹಾಗು ಓರ್ವ ಭಾರತೀಯನಿದ್ದನು.  ‍6 ವಾರಗಳ ಸತತ ಕಾರ್ಯಾಚರಣೆಯ ನಂತರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ಸಾಧ್ಯವಾಗದಿರುವುದರಿಂದ ಮೃತದೇಹಗಳನ್ನು ಮೂಲ ಶಿಬಿರಕ್ಕೆ ತಲುಪಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹತ್ತಿರದ ನಗರಕ್ಕೆ ತಲುಪಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nanda Devi peak mountain climbers Avalanche Himalaya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ