ರಾಜಧಾನಿಯಲ್ಲಿ ಮತ್ತೆ ಸರಣಿ ಸರಗಳ್ಳತನ

Chain snatch

02-07-2019

ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಮಟ್ಟ ಹಾಕಿ ಅಪರಾಧ ಹತ್ತಿಕ್ಕಲು ನಗರ ಪೊಲೀಸ್ ಅಲೋಕ್ ಕುಮಾರ್ ಅವರು ಕೈಗೊಂಡಿರುವ ಕಠಿಣ ಕ್ರಮಗಳ ನಡುವೆಯೂ ಸೋಮವಾರ ಮತ್ತೆ ಸರಗಳ್ಳರ ಹಾವಳಿ ತಲೆ ಎತ್ತಿ ಕೇವಲ 3 ಗಂಟೆಗಳೊಳಗೆ ನಗರದ 4 ಕಡೆಗಳಲ್ಲಿ ಸರಗಳ್ಳತನ ನಡೆದಿದ್ದು ಮಹಿಳೆಯಲ್ಲಿ ಆತಂಕ ಉಂಟುಮಾಡಿದೆ.

ಮಲ್ಲೇಶ್ವರಂನಿಂದ ಮಧ್ಯಾಹ್ನ 12.30 ರಿಂದ ವೈಯಾಲಿಕಾವಲ್‍ನಿಂದ ಆರಂಭಗೊಂಡಿರುವ ಸರಗಳವು ಅಲ್ಲಿಂದ ವಿಜಯನಗರ, ಪರಪ್ಪನ ಅಗ್ರಹಾರ ಸೇರಿ ಪ್ರತ್ಯೇಕ 4 ಕಡೆಗಳಲ್ಲಿ ಸರಗಳ್ಳರು ಕೇವಲ 3 ಗಂಟೆಗಳೊಳಗೆ ನಾಲ್ವರು ಮಹಿಳೆಯರ ಸರ ಕಸಿದು ಪರಾರಿಯಾಗಿದ್ದಾರೆ.

ಮಲ್ಲೇಶ್ವರಂನ ಈಜುಕೊಳ ಬಡಾವಣೆಯ 12ನೇ ಕ್ರಾಸ್‍ನಲ್ಲಿ ಯಶೋಧಮ್ಮ (63) ಅವರು ಮಧ್ಯಾಹ್ನ 12.30ರ ವೇಳೆ ಹತ್ತಿರದ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ಬರುವಾಗ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಅವರ ಕತ್ತಿನಲ್ಲಿದ್ದ 30 ಗ್ರಾಂ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದಾರೆ.

ಮಲ್ಲೇಶ್ವರಂನ ಈಜುಕೊಳ ಬಡಾವಣೆಯಿಂದ 18ನೇ ಕ್ರಾಸ್‍ನ ಅಮ್ಮಣ್ಣಿ ಕಾಲೇಜ್‍ನ ಬೆಂಗಳೂರು ಒನ್ ಬಳಿಗೆ ಕೇವಲ 10 ನಿಮಿಷಗಳಲ್ಲಿ (12.40) ಬಂದಿರುವ ದುಷ್ಕರ್ಮಿಗಳು, ಕಂದಾಯ ಕಟ್ಟಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಧುಮತಿ (55) ಅವರ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.

ವಿಜಯನಗರ ಮಲ್ಲೇಶ್ವರಂನಿಂದ ಪರಾರಿಯಾದ ದುಷ್ಕರ್ಮಿಗಳು ವಿಜಯನಗರದ ಹಂಪಿ ನಗರದ 11ನೇ ಕ್ರಾಸ್‍ಗೆ ಮಧ್ಯಾಹ್ನ 1.15ಕ್ಕೆ ಬಂದು ಧ್ಯಾನ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜಗದಾಂಭ (66) ಎಂಬುವರ ಕತ್ತಿನಲ್ಲಿದ್ದ 40 ಗ್ರಾಂ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.

ವಿಜಯನಗರದಿಂದ ಪರಪ್ಪನ ಅಗ್ರಹಾರ ಸಿಂಗಸಂದ್ರದ ಬಳಿಗೆ ಮಧ್ಯಾಹ್ನ 3.50ರ ವೇಳೆ ಬಂದಿರುವ ದುಷ್ಕರ್ಮಿಗಳು  ನಡೆದುಕೊಂಡು ಹೋಗುತ್ತಿದ್ದ ಚಂದ್ರಮ್ಮ (55) ಎಂಬುವರ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದು ಪರಾರಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chain snatch Malleshwaran Police Vijay Nagar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ