ಸಂಬಂಧಿಯನ್ನು ಪ್ರೀತಿಸಿದ ಯುವಕನನ್ನು ಹಾಕಿ ಸ್ಟಿಕ್‍ನಿಂದ ಹೊಡೆದು, ಕತ್ತುಸೀಳಿ ಹತ್ಯೆ

murder magadi road police station gudemarana halli

02-07-2019

ಬೆಂಗಳೂರು:ಸಂಬಂಧಿಯನ್ನು ಪ್ರೀತಿಸಿದ ಯುವಕನನ್ನು ಹಾಕಿ ಸ್ಟಿಕ್‍ನಿಂದ ಹೊಡೆದು, ಕತ್ತುಸೀಳಿ ಹತ್ಯೆ ಮಾಡಿರುವ ಧಾರುಣ ಘಟನೆ ಮಾಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿಯ ಮಾನಗಲ್‍ನ ರವಿ (25) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಸೆಂಟ್ರಿಂಗ್(ಕಂಬಿಕಟ್ಟುವ)ಕೆಲಸ ಮಾಡುತ್ತಿದ್ದ ರವಿ ಸೋದರ ಮಾವನ ಮಗಳನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನು.ವಿಚಾರ ಗೊತ್ತಾಗಿ ಸೋದರ ಮಾವ ತನ್ನ ಸಂಬಂಧಿಕನೊಬ್ಬನಿಗೆ ರವಿಯನ್ನು ಕರೆದು ಆತನಿಗೆ ಬುದ್ಧಿ ಹೇಳಿ ನನ್ನ ಮಗಳ ಸಹವಾಸಕ್ಕೆ ಬರದಂತೆ ತಿಳಿಸು ಎಂದು ಹೇಳಿದ್ದನು.

ಇದೇ ವಿಚಾರವಾಗಿ ಭಾನುವಾರ ರಾತ್ರಿ ಸುಮಾರು ಎಂಟು ಗಂಟೆ ಸಮಯದಲ್ಲಿ ನಾಗೇಶ್ ಸಂಬಂಧಿಕ ಹಾಗು ಆತನ ಸಹಚರರು ರವಿಯನ್ನು ಪಟ್ಟಣದ ವಾಣಿಜ್ಯ ಸಂಕೀರ್ಣದ ಬಳಿಗೆ ಬರುವಂತೆ ತಿಳಿಸಿದ್ದಾರೆ, ರವಿಗೆ ಯಾವುದೇ ವಿಚಾರ ತಿಳಿಯದೆ ಆರೋಪಿಗಳು ತಿಳಿಸಿದ ಸ್ಥಳಕ್ಕೆ ಬಂದಿದ್ದಾನೆ,

ಆರೋಪಿಗಳು ಕುಡಿದ ಅಮಲಿನಲ್ಲಿ ರವಿ ಬಂದ ಕೂಡಲೇ ಹಾಕಿ  ಸ್ಟಿಕ್‍ನಿಂದ ಹಿಗ್ಗಾಮುಗ್ಗಾ ಥಳಿಸಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಬಾಲಾಜಿ ಚಿತ್ರ ಮಂದಿರದ ಬಳಿ  ಕತ್ತು ಸೀಳಿ ರವಿ ಮೃತ ಪಟ್ಟಿರುವುದನ್ನು ಖಚಿತಪಡಿಸಿಕೊಂಡು ಗುಡೇಮಾರನ ಹಳ್ಳಿ ರಸ್ತೆಯ ಬಿಳಿಗುಂಬದ ಸೇತುವೆ ಹಳ್ಳಕ್ಕೆ ರವಿಯ ಶವವನ್ನು ಎಸೆದು ನಾಗೇಶ್‍ಗೆ ವಿಷಯ ತಿಳಿಸಿ ಪರಾರಿಯಾಗಿದ್ದಾರೆ.

ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು, ಶವ ಸಿಕ್ಕ ಸ್ಥಳಕ್ಕೆ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್, ಡಿವೈಎಸ್ಪಿ ಲಕ್ಷ್ಮೀ ನರಾಯಣ್, ಎಸೈ ನರೇಂದ್ರಬಾಬು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Crime Magadi Road Police Love


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ