ಮುಂಬೈ ಮಳೆ : ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

54 flights diverted, 52 cancelled from Mumbai airport

02-07-2019

ಮಹಾನಗರಿ ಮುಂಬೈನಲ್ಲಿ ಮಳೆ ಆರ್ಭಟಿಸುತ್ತಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲ ಕೆರೆಗಳಂತಾಗಿದ್ದು, ವ್ಯಾಪಾರ, ವಹಿವಾಟು ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ರೈಲು ಹಾಗೂ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯವಾಗಿದೆ. ಈಗಾಗಲೇ 52 ವಿಮಾನಗಳ ಹಾರಾಟ ರದ್ದಾಗಿದ್ದು, 55 ವಿಮಾನಗಳ ಹಾರಾಟ ತಡವಾಗಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಎಸ್ ಜಿ 6237 ವಿಮಾನ ರನ್ ವೇ ಯಿಂದ ಪಕ್ಕಕ್ಕೆ ಹೋಗಿ ಲ್ಯಾಂಡ್ ಆಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಮುಖ್ಯ ರನ್ ವೇ ಯನ್ನು ಬಂದ್ ಮಾಡಲಾಗಿದೆ. 2 ನೇ ರನ್ ವೇ ಯಿಂದ ವಿಮಾನಗಳ ಹಾರಾಟ ನಡೆಯುತ್ತಿದ್ದು, ಅದರಲ್ಲೂ ಕೂಡ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಮೊದಲಿಗೆ ಸ್ಥಿತಿಗೆ ಬರಲು 48 ಗಂಟೆಗಳು ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mumbai Airport Flight Heavy Rain


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ