'ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ನಾವೇ ನಿರ್ವಹಣೆ ಮಾಡಬೇಕು'

Bengluru can become garbage less only if we separate it in our homes

01-07-2019

ಬೆಂಗಳೂರು- ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ನಾವೇ ನಿರ್ವಹಣೆ ಮಾಡಿದರೆ ಮಾತ್ರ ರಾಜಧಾನಿ ಬೆಂಗಳೂರನ್ನು ತ್ಯಾಜ್ಯ ಮುಕ್ತ ಮಾಡಲು ಸಾಧ್ಯ ಎಂದು ನಿವೃತ್ತ ಉಪ ಲೋಕಾಯುಕ್ತ ಹಾಗೂ ಘನತ್ಯಾಜ್ಯ ನಿರ್ವಹಣೆ ಸಮಿತಿ ಅಧ್ಯಕ್ಷ ಸುಭಾಷ್ ಆದಿ ತಿಳಿಸಿದರು.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಮಟ್ಟದ ಸಮಿತಿಯ ಪಶ್ಚಿಮ ವಲಯ ಮೊದಲ ಘನತ್ಯಾಜ್ಯ ನಿರ್ವಹಣೆ ಪಾಲುದಾರಿಕೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಕಸವನ್ನು ನಾವೇ ನಿರ್ವಹಣೆ ಮಾಡದಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಒಟ್ಟು 11,850 ಟನ್ ನಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ 5,600 ಟನ್‍ನಷ್ಟು ಕಸ ಪ್ರತಿನಿತ್ಯ ಉತ್ಪತ್ತಿಯಾಗುತ್ತಿದೆ. ನಿಯಮಾನುಸಾರ ಹಸಿಕಸ, ಒಣಕಸ ಹಾಗೂ ಹಾನಿಕಾರಕ ಕಸವನ್ನು ವರ್ಗೀಕರಿಸಿ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ತಲುಪಿಸುವಲ್ಲಿ ಜನರು ಜನಪ್ರತಿನಿಧಿಗಳು ಕೈಜೋಡಿಸಿದರೆ, ಬೆಂಗಳೂರನ್ನು ತ್ಯಾಜ್ಯ ಮುಕ್ತ ನಗರವನ್ನಾಗಿ ಪರಿವರ್ತಿಸಬಹುದು ಎಂದು ಹೇಳಿದರು.

ಘನತ್ಯಾಜ್ಯವನ್ನು ಭೂಮಿಯ ಮೇಲೆ ವಿಲೇವಾರಿ ಮಾಡುತ್ತಿರುವುದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತಿದೆ. ಪರಿಸರ ದಿನಾಚರಣೆ ಎಂದು ಘೋಷಿಸಿದ ನಮ್ಮ ಕಸ, ನಮ್ಮ ಜವಾಬ್ದಾರಿಯನ್ನು ನಾಗರಿಕರು ಯಶಸ್ವಿಯಾಗಿ, ನಿಭಾಯಿಸಬೇಕು ಎಂದು ಕರೆ ನೀಡಿರ ಅವರು ತ್ಯಾಜ್ಯ ನಿರ್ವಹಣಾ ಘಟಕಗಳ ಉತ್ತಮ ಕಾರ್ಯ ನಿರ್ವಹಣೆಯಾಗಬೇಕಾದರೆ ಮನೆ ಮಟ್ಟದಲ್ಲಿಯೇ ಕಸಗಳ ವಿಂಗಡಣೆಯಾಗಬೇಕೆಂದು ತಿಳಿಸಿದರು.

ಹಸಿರು ನ್ಯಾಯಾಧೀಕರಣ ಸೂಚನೆಯಂತೆ ಆಯಾಯ ರಾಜ್ಯಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಯಶಸ್ವಿ ಕಾರ್ಯಾಚರಣೆಗೆ ನಾಗರೀಕರು, ಜನಪ್ರತಿನಿಧಿಗಳು ಬೆಂಬಲಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಮಾಜಿ  ಉಪಮೇಯರ್ ಭದ್ರೇಗೌಡ, ಮೇಯರ್ ಪದ್ಮಾವತಿ, ಅಧಿಕಾರಿಗಳಾದ ಮನೋಜ್ ಕುಮಾರ್, ಚಿರುಮೂರ್ತಿ ಬಿಬಿಎಂಪಿ ಸದಸ್ಯರಾದ ಸತ್ಯನಾರಾಯಣ, ರೂಪ, ಮಂಜುಳಾ ವಿಜಯಕುಮಾರ್, ರೇಖಾ ಕದಿರೇಶ್, ಇನ್ನಿತರ ಸದಸ್ಯರು ಉಪಸ್ಥಿತಿರಿದ್ದರು.


ಸಂಬಂಧಿತ ಟ್ಯಾಗ್ಗಳು

Subhash Adi Garbage Bengaluru waste management


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ