ಬೆಂಗಳೂರಲ್ಲೊಬ್ಬ ಡಿಫರೆಂಟ್ ಕಳ್ಳ

Different thief in Bengaluru

01-07-2019

ಬೆಂಗಳೂರು: ನಕಲಿ ಕೀ ಬಳಸಿ ಕಳವು ಮಾಡಿದ ಆಟೋಗಳಲ್ಲಿ ರಾತ್ರಿಯೆಲ್ಲಾ ಬಾಡಿಗೆಗೆ ಹೋಗಿ ಬೆಳಿಗ್ಗೆ ಎಲ್ಲೆಂದರಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಚಂದ್ರು ಅಲಿಯಾಸ್ ಡೋಂಗಿ ಚಂದ್ರು(26)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ ಆರು ಆಟೋಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಆರೋಪಿ ಡೋಂಗಿ ಚಂದ್ರು ಕತ್ತಲಾಗುತ್ತಿದಂತೆ ವಾಹನ ನಿಲುಗಡೆ ಪ್ರದೇಶಗಳಲ್ಲಿ ನಿಲ್ಲಿಸಿರುವ ಆಟೋಗಳಲ್ಲಿ ಹೊಸದಾಗಿರುವುದನ್ನು ಆಯ್ಕೆ ಮಾಡಿಕೊಂಡು ನಕಲಿ ಕೀ ಬಳಸಿ ಕಳವು ಮಾಡಿ ಮುಂಜಾನೆಯವರೆಗೂ ಬಾಡಿಗೆ ಹೊಡೆದು ಹಣ ಮಾಡಿಕೊಂಡು ಬೆಳಗಾಗುವಷ್ಟರಲ್ಲಿ ಬಾಡಿಗೆ ನಿಲ್ಲಿಸಿ, ಅಲ್ಲೇ ಆಟೋ ಬಿಟ್ಟು ಪರಾರಿಯಾಗುತ್ತಿದ್ದ .
ಚಾಮರಾಜಪೇಟೆಯಲ್ಲಿ ನಡೆದಿದ್ದ ಆಟೋ ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕಳವು ಮಾಡಿದ ಸ್ಥಳದ ಬಳಿ ಅಳವಡಿಸಲಾಗಿದ್ದ ಸಿಸಿ ಕ್ಯಾಮಾರದಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Crime Different Thief Police Auto


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ