ಐದಾರು ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ

robbers robes 5 shops in bengaluru

01-07-2019

ಬೆಂಗಳೂರು: ಐದಾರು ಅಂಗಡಿಗಳ ಬೀಗ ಮುರಿದು ಸರಣಿ ಕಳವು ಮಾಡಿರುವ ದುಷ್ಕರ್ಮಿಗಳು  ಸಾವಿರಾರು ರೂಗಳನ್ನು ದೋಚಿ ಪರಾರಿಯಾಗಿರುವ ಕೃತ್ಯ ನಿನ್ನೆ ಮಧ್ಯರಾತ್ರಿ ಎನ್‍ಆರ್ ಕಾಲೋನಿಯ ಡಿವಿಜಿ ರಸ್ತೆಯಲ್ಲಿ ನಡೆದಿದೆ.
ಡಿವಿಜಿ ರಸ್ತೆಯ ಮೆಡಿಕಲ್‍ಸ್ಟೋರ್,ಹೋಟೆಲ್,ಬೀಡಾ ಅಂಗಡಿ, ಬುಕ್ ಸ್ಟಾಲ್,ಗುಜರಿ ಅಂಗಡಿಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಸುಮಾರು 30 ಸಾವಿರ ನಗದು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮಧ್ಯರಾತ್ರಿ ವೇಳೆ ಕಳವಿನ ಕೃತ್ಯ ನಡೆದಿದ್ದು ಬೆಳಿಗ್ಗೆ ಅಂಗಡಿ ತೆರೆದ ಮಾಲೀಕರು ಕಳ್ಳತನ ವಾಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ  ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಬಸವನಗುಡಿ ಪೊಲೀಸರು ಸಿಸಿ ಕ್ಯಾಮಾರದಲ್ಲಿ ಇಬ್ಬರು ಯುವಕರು ಅಂಗಡಿಗೆ ನುಗ್ಗಿ ಕಳವು ಮಾಡಿರುವ ದೃಶ್ಯವಿರುವುದನ್ನು ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ.ರೋಹಿಣಿ ಕಟೋಜ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Serial robbery Bengaluru crime Crime Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ