ಸಹಕೆಲಸಗಾರನಿಂದಲೇ ಕೊಲೆ

person got killed by co-worker

01-07-2019

ಬೆಂಗಳೂರು: ಗಾರೆ ಕೆಲಸಗಾರನೊಬ್ಬನನ್ನು ಸಹಕೆಲಸಗಾರನೇ ಕೈನಿಂದ ಗುದ್ದಿ, ಇಟ್ಟಿಗೆಯಿಂದ ತಲೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ರಾಜರಾಜೇಶ್ವರಿ ನಗರದ ಐಡಿಎಲ್ ಹೋಂ ಬಳಿ ನಿನ್ನೆ ರಾತ್ರಿ ನಡೆದಿದೆ.
ಕೊಲೆಯಾದವರನ್ನು ತಮಿಳುನಾಡು ಮೂಲದ ಧ್ಯಾನ್ ಸಾಗರ್ (33)ಎಂದು ಗುರುತಿಸಲಾಗಿದೆ,ಕೃತ್ಯವೆಸಗಿದ ರಂಜಿತ್ (23) ನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನಿಂದ ಕೆಲಸ ಅರಸಿಕೊಂಡು ಬಂದಿದ್ದ ಧ್ಯಾನ್ ಸಾಗರ್ ಹಾಗೂ ರಂಜಿತ್, ಐಡಿಯಲ್ ಹೋಮ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡು ಅಲ್ಲೇ ವಾಸಿಸುತ್ತಿದ್ದರು.
ಕೆಲಸಕ್ಕೆ ನಿನ್ನೆ ರಜೆ ಇದ್ದಿದ್ದರಿಂದ ಎಲ್ಲರೂ ಸೇರಿ ಮದ್ಯಪಾನ ಮಾಡಿ ರಾತ್ರಿ 10ರ ವೇಳೆ ಊಟ ಮುಗಿದ ನಂತರ, ಜಗಳಕ್ಕೆ ಇಳಿದಿದ್ದಾರೆ. ವಯಸ್ಸಿನಲ್ಲಿ ಹಿರಿಯನಾಗಿದ್ದ ಕಾರಣಕ್ಕೆ ಧ್ಯಾನ್ ಸಾಗರ್, ಸಹಕೆಲಸಗಾರರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಇದರಿಂದ ಬೇಸತ್ತಿದ್ದ ರಂಜಿತ್ ಜಗಳದಲ್ಲಿ ಆಕ್ರೋಶಗೊಂಡು ಕೈಯಿಂದ ಬಲವಾಗಿ ಧ್ಯಾನ್ ಸಾಗರ್‍ಗೆ ಗುದ್ದಿದ್ದಾನೆ. 
ನಂತರ, ಇಟ್ಟಿಗೆಯಿಂದ ತಲೆಗೆ ಹೊಡೆದು, ಫುಟ್‍ಪಾತ್ ಮೇಲೆ ತಳ್ಳಿದ್ದು, ಗಂಭೀರವಾಗಿ ಗಾಯಗೊಂಡ ಧ್ಯಾನ್ ಸಾಗರ್‍ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜರಾಜೇಶ್ವರಿ ನಗರದ ಪೊಲೀಸರು, ಆರೋಪಿ ರಂಜಿತ್‍ನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

Murder Colleague crime police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ