ದೋಸ್ತಿ ಸರ್ಕಾರದಲ್ಲಿ ಸಾಲು ಸಾಲು ರಾಜೀನಾಮೆ ?

Karnataka Government in treble?

01-07-2019

ಬೆಂಗಳೂರು: ಶಾಸಕ ಆನಂದ್‍ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರದೊಳಗೆ 8ರಿಂದ 13 ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರತಾಪ್‍ಗೌಡ ಪಾಟೀಲ್(ಮಸ್ಕಿ), ಬಸವರಾಜ್ ದದ್ದಲ್ (ರಾಯಚೂರು ಗ್ರಾಮೀಣ), ಬಿ.ಸಿ.ಪಾಟೀಲ್ (ಹಿರೇಕೆರೂರು), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್‍ಕುಮಟಳ್ಳಿ (ಅಥಣಿ), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಜೆ.ಗಣೇಶ್ (ಕಂಪ್ಲಿ), ಶ್ರೀಮಂತಗೌಡ ಪಾಟೀಲ್ (ಕಾಗವಾಡ), ಜೆಡಿಎಸ್‍ನ ಕೆ.ಆರ್.ನಾರಾಯಣಗೌಡ (ಕೆ.ಆರ್.ಪೇಟೆ), ಎಚ್.ಕೆ.ಕುಮಾರಸ್ವಾಮಿ (ಸಕಲೇಶಪುರ) ಹಾಗೂ ಮಹದೇವ್ (ಪಿರಿಯಾಪಟ್ಟಣ) ಅವರನ್ನು ಸಂಪರ್ಕಿಸಿರುವ ಬಿಜೆಪಿ ನಾಯಕರು ಇವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಗೊತ್ತಾಗಿದೆ.
ಈ ಎಲ್ಲಾ ಶಾಸಕರು ಒಂದೇ ಹಂತದಲ್ಲಿ ರಾಜೀನಾಮೆ ನೀಡುವ ಬದಲು ಹಂತ ಹಂತವಾಗಿ ರಾಜೀನಾಮೆ ಸಲ್ಲಿಸಲು ಸೂಚಿಸಲಾಗಿದೆ. ಅದರಂತೆ ಭಿನ್ನಮತೀಯರು ಒಬ್ಬಬ್ಬರಾಗಿಯೇ ರಾಜೀನಾಮೆ ಕೊಡುವ ಮೂಲಕ ದೋಸ್ತಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಮಾಡಲು ಕೇಂದ್ರ ವರಿಷ್ಠರು ಕೂಡ ರಾಜ್ಯ ನಾಯಕರಿಗೆ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿ ಪಕ್ಷಕ್ಕೆ ಬರುವ ಶಾಸಕರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಅಂದರೆ ಸಚಿವ ಸ್ಥಾನ, ಉಳಿದವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಆಶ್ವಾಸನೆ ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Government BJP Resignation Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ