ಪೆಹ್ಲು ಮೇಲೆ ಹಲ್ಲೆಯಾಗಿಲ್ಲ ಎಂದ ಬಿಜೆಪಿ ಶಾಸಕ ಅಹುಜಾ

Gyandev Ahuja Statement

29-06-2019

ಜೈಪುರ: ರಾಜಸ್ಥಾನ ಪೊಲೀಸರು ಪೆಹ್ಲು ಖಾನ್ ಹತ್ಯೆ ಕುರಿತು, ಅವರ ವಿರುದ್ಧವೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದೀಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಸಿದ್ಧವಾಗಿದೆ. ಏಪ್ರಿಲ್ 2017ರಲ್ಲಿ ಪೆಹ್ಲು ಖಾನ್ ಮೇಲೆ ಹಲ್ಲೆ ನಡೆಸಲಾಗಿತ್ತು. ಆದರೆ, ಈಗ ಆತನ ವಿರುದ್ಧವೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಗ್ಯಾನ್‍ ದೇವ್ ಅಹುಜಾ, ಪೆಹ್ಲು ಖಾನ್ ಮತ್ತು ಆತನ ಸೋದರ, ಮಕ್ಕಳು ನಿರಂತರ ಅಪರಾಧ ಮಾಡುವ ಹವ್ಯಾಸ ಹೊಂದಿರುವವರು ಮತ್ತು ಅಕ್ರಮ ಗೋ ಸಾಗಣೆಯಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಗೋರಕ್ಷಕರ ಮೇಲಿನ ಮತ್ತು ಹಿಂದೂ ಪರಿಷತ್ತಿನ ವಿರುದ್ಧದ ಎಲ್ಲ ಆರೋಪಗಳೂ ತಪ್ಪು ಎಂದು ಅವರು ಹೇಳಿದ್ದಾರೆ.

ಅಲ್ಲದೇ, ಸ್ಥಳೀಯರು ಪೆಹ್ಲು ಖಾನ್ ಒಡೆತನದ ವಾಹನವನ್ನು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಮಯದಲ್ಲಿ ಹಿಡಿದರು. ಅವರು ಕೇವಲ ಅವರನ್ನು ತಡೆದರು. ಅವನು ಪೊಲೀಸ್ ವಶದಲ್ಲಿದ್ದಾಗ ಸಾವಿಗೀಡಾಗಿದ್ದಾನೆ. ಸ್ಥಳೀಯರು ಅವನ ಮೇಲೆ ಹಲ್ಲೆ ಮಾಡಿಲ್ಲ. ಈಗ ಅವನ ವಿರುದ್ಧವೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಕಾಂಗ್ರೆಸ್ ಇದರ ಶ್ರೇಯವನ್ನು ಪಡೆದುಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಆತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿತ್ತು ಎಂದು ಅವರು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Gyandev Ahuja Pehlu Khan BJP MLA Rajastan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ