ಆರೋಗ್ಯಪೂರ್ಣ ತ್ವಚೆ ಬೇಕೆಂದರೆ ಹೀಗೆ ಮಾಡಿ..!

Here

29-06-2019

ಆರೋಗ್ಯಪೂರ್ಣ, ಹೊಳಪಿನ ತ್ವಚೆ ಅನ್ನೋದು ಎಲ್ಲರಿಗೂ ಬೇಕಾದದ್ದೆ. ಆದರೆ ಅದನ್ನು ಹೇಗೆ ಪಡೆಯೋದು ಅನ್ನೋದು ಹಲವರ ಚಿಂತೆ. ಈ ಕೆಳಗಿನ ಜೀವನಶೈಲಿಯನ್ನು ರೂಪಿಸಿಕೊಂಡರೆ ನೀವು ಖಂಡಿತ ಆರೋಗ್ಯಪೂರ್ಣ ತ್ವಚೆಯನ್ನು ಪಡೆಯಬಹುದು.

ನೀವು ದಿನಕ್ಕೆ 4-5 ಲೀಟರ್ ನೀರು ಕುಡಿದಲ್ಲಿ ತ್ವಜೆಯಲ್ಲಿ ತೇವಾಂಶವಿರುತ್ತದೆ. ಇದರಿಂದ ಮುಖದಲ್ಲಿ ಜೀವಕಳೆ ಇಲ್ಲದಿರುವುದು, ಸುಸ್ತು, ಕಳಾಹೀನತೆ ಕಾಣಿಸದು.

ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸೋದ್ರಿಂದಲೂ ಮುಖ ಆರೋಗ್ಯಪೂರ್ಣವಾಗಿರುತ್ತದೆ. ಕ್ಲೆಂಸಿಂಗ್ ಮಾಡೋದ್ರಿಂದ ಮುಖದ ರಂಧ್ರಗಳಲ್ಲಿ ಸಿಕ್ಕಿಕೊಂಡಿರುವ ಕೊಳೆ, ಧೂಳುಗಳನ್ನು, ರಾಸಾಯನಿಕಗಳನ್ನು ತೆಗೆಯುವುದರಿಂದ ಆರೋಗ್ಯವಾಗಿರುತ್ತದೆ.

ಚೆನ್ನಾಗಿ ನಿದ್ದೆ ಮಾಡುವುದರಿಂದಲೂ ತ್ವಚೆ ಚೆನ್ನಾಗಿರುತ್ತದೆ. ರಾತ್ರಿ 8 ಗಂಟೆ ಚೆನ್ನಾಗಿ ನಿದ್ದೆ ಮಾಡುವುದರಿಂದ ಮುಖ ಸುಕ್ಕಾಗದು, ಕಣ್ಣಿನ ಕೆಳಗೆ ಕಪ್ಪು ವರ್ತುಲ ಬರದು ಹಾಗೂ ತ್ವಚೆಯಲ್ಲಿ ಜೀವಂತಿಕೆ ಇರುತ್ತದೆ.

ವ್ಯಾಯಾಮದಿಂದಲೂ ನಮ್ಮ ಆರೋಗ್ಯ ಮಾತ್ರವಲ್ಲದೇ ತ್ವಚೆಯ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ವ್ಯಾಯಾಮದಿಂದ ಮುಖ ಹಾಗೂ ದೇಹ ಬೆವರುವುದರಿಂದ ಹೊಳಪು ಇನ್ನಷ್ಟು ಹೆಚ್ಚುತ್ತದೆ.


ಸಂಬಂಧಿತ ಟ್ಯಾಗ್ಗಳು

Face skin Sleep Exercise skin care


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ