ವೃದ್ಧರ ಸುಲಿಗೆ ಆರೋಪಿ ಸೆರೆ

police arrests robbers

28-06-2019

ವಾರದ ಹಿಂದೆ ವೃದ್ಧ ದಂಪತಿಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ಮೂಲದ ಶ್ರೀನಿವಾಸ್‍ನ್ (32)ಬಂಧಿತ ಆರೋಪಿಯಾಗಿದ್ದಾನೆ.ಅತ್ತಿಬೆಲೆಯ ಗೋಲ್ಡನ್ ಗೇಟ್ ಬಡಾವಣೆಯ ಮುನಿರೆಡ್ಡಿ ಮತ್ತು ಜಯ್ಯಮ್ಮ ವೃದ್ಧ ದಂಪತಿಯ ಮನೆಗೆ ಬಂಧಿತ ಆರೋಪಿಯು ಕಳೆದ ಜೂ. 21 ರಂದು ಸಂಜೆ 6ರ ವೇಳೆ ನುಗ್ಗಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿ  ಪರಾರಿಯಾಗಿದ್ದನು.

ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಆರೋಪಿ ತಮಿಳುನಾಡಿನಲ್ಲಿ ಕೊಲೆಯೊಂದನ್ನು ಮಾಡಿರುವ ಕೃತ್ಯ ಹಾಗೂ ಮುನಿರೆಡ್ಡಿ ದಂಪತಿ ಮನೆಯಲ್ಲಿ ಇಬ್ಬರು ಇರುವುದನ್ನು ಗಮನಿಸಿ ಹೊಂಚು ಹಾಕಿ ಹಲ್ಲೆ ನಡೆಸಿ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbers Crime Bengaluru Crime Attibele Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ