ಹಳೆ ದ್ವೇಷ, ರೌಡಿ ಶೀಟರ್ ಕೊಲೆ

rowdy got killed in revenge murder

28-06-2019

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ರೌಡಿ ಸಲೀಂ ಅಲಿಯಾಸ್ ಶಾಹಿದ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳಲ್ಲಿ ಇಬ್ಬರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯತ್ನ,ಬೆದರಿಕೆ,ಸುಲಿಗೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ಆತನನ್ನ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿತ್ತು.ಹಳೇ ವೈಷಮ್ಯಕ್ಕೆ ಕೊಲೆ ನಡೆದಿದ್ದು ಕೃತ್ಯ ನಡೆಸಿದ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗೋವಿಂದ ನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ತಮಿಳುನಾಡು ಮೂಲದ ಸಲೀಂ ನಿನ್ನೆ ಮನೆಯಲ್ಲಿದ್ದಾಗ ಮೂರು ಜನ ಸ್ನೇಹಿತರು ಬಂದು ಮಾತುಕತೆ ನಡೆಸಲು ಹೊರಗೆ ಕರೆದೊಯ್ದಿದ್ದರು. ಬಳಿಕ ಗೋವಿಂದನಗರದ ರೇಲ್ವೆ ಗೇಟ್ ಬಳಿ ರೌಡಿ ಶೀಟರ್ ಶಾಹಿದ್‍ನನ್ನು ಬರ್ಬರವಾಗಿ ಹತ್ಯೆ ಗೈದು ಪರಾರಿಯಾಗಿದ್ದಾರೆ.

ಶಾಹಿದ್ ತಾಯಿಗೆ ನಾಲ್ವರು ಮಕ್ಕಳಿದ್ದು ಎಲ್ಲರು ಚೆನ್ನೈನಲ್ಲಿ ವಾಸವಿದ್ದಾರೆ ಅವರನ್ನು ಬಿಟ್ಟು ಬಂದಿದ್ದ ತಾಯಿ ಶಾಹಿದ್ ಜೊತೆಗೆ ವಾಸವಿದ್ದರು. ಶಾಹಿದ್‍ನನ್ನು ನಿನ್ನೆ ಮಧ್ಯಾಹ್ನ ಕರೆದುಕೊಂಡು ಹೋಗಿದ್ದ ಸ್ನೇಹಿತರು ಹೆಚ್ಚು ಆತ್ಮೀಯರಾಗಿದ್ದರು. ಆಗಾಗ ಮನೆಗೆ ಬರುತ್ತಿದ್ದರು.ಅವರು ಕರೆದುಕೊಂಡು ಹೋದ ಮೇಲೆ ರಾತ್ರಿ ಕೊಲೆಯಾಗಿರುವುದು ಪತ್ತೆಯಾಗಿದೆ.

ಕೊಲೆಯಾದ ಶಾಹಿದ್ ತಾಯಿ ಹೇಳಿಕೆ ದಾಖಲಿಸಿಕೊಂಡಿರುವ ಕೆಜಿಹಳ್ಳಿ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Revenge murder crime rowdy Rowdy Saleem


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ