ಭಯೋತ್ಪಾದನೆ ಕುರಿತ ಮೋದಿ ಮಾತಿನಲ್ಲಿ ಹೊಸತನವಿಲ್ಲ: ಫಾರೂಕ್ ಅಬ್ದುಲ್ಲಾ

Nothing new in Modi

28-06-2019

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎಲ್ಲೆಡೆ ಭಯೋತ್ಪಾದನೆ ಕುರಿತು ಮಾತನಾಡುತ್ತಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಸಂಸದ ಮತ್ತು ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದರು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತಮ ಪಾಠವನ್ನು ಕಲಿಸಿದ್ದಾರೆ. ಅವರು ತೆರಿಗೆಯನ್ನು ಇಳಿಸಿ ಎಂದು ಹೇಳಿದ್ದಾರೆ. ಉಭಯ ನಾಯಕರೂ ಮಾತುಕತೆ ನಡೆಸಬೇಕು ಮತ್ತು ಈ ಕುರಿತು ಯಾವುದಾದರೂ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಅಮೆರಿಕದೊಂದಿಗಿನ ನಮ್ಮ ಸಂಬಂಧ ಆರೋಗ್ಯಕರವಾಗಿರುತ್ತದೆ ಎಂದು ಅವರು ಹೇಳಿದರು.

ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಿ ಮೋದಿಯವರು, ಸಮಸ್ತ ಮಾನವ ಕುಲಕ್ಕೆ ಭಯೋತ್ಪಾದನೆ  ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ. ಉಗ್ರವಾದ ಸೇರಿದಂತೆ ಇಂದು ಜಗತ್ತು ಪ್ರಮುಖವಾದ ಮೂರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದಿದ್ದರು.


ಸಂಬಂಧಿತ ಟ್ಯಾಗ್ಗಳು

Farooq Abdullah Narendra Modi Terrorism G20 summit


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ