ಗಾಂಧಿ-ನೆಹರು ಕುಟುಂಬಕ್ಕಾಗಿ ನರಸಿಂಹರಾವ್ ಹಿನ್ನೆಲೆಗೆ: ಮಾಜಿ ಪ್ರಧಾನಿ ಮೊಮ್ಮಗ ಸುಭಾಷ್

P V Narasimha Rao is blamed for failure of congress to protect Gandhi and Neharu family

28-06-2019

ದೆಹಲಿ: ಜಗತ್ತಿನ ಜನರೆಲ್ಲ ಪಿ ವಿ ನರಸಿಂಹ ರಾವ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುತ್ತಾರೆ. ರಾಜೀವ್ ಗಾಂಧಿಯವರ ಸಾವಿನ ನಂತರ ಅವರು ಪ್ರಧಾನಿಯಾಗಿದ್ದರು ಎಂದು ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಮೊಮ್ಮಗ ಮತ್ತು ತೆಲಂಗಾಣ ಬಿಜೆಪಿಯ ವಕ್ತಾರ ಎನ್ ವಿ ಸುಭಾಷ್ ಹೇಳಿದರು.

1996ರ ಸೋಲಿನ ನಂತರ ಅನೇಕ ಕಾರಣಗಳಿಂದ ಪಿ ವಿ ನರಸಿಂಹರಾವ್ ಅವರನ್ನು ಹಿನ್ನೆಲೆಗೆ ಕಳುಹಿಸಲಾಯಿತು. ಆದರೆ, ಇದಕ್ಕೆ ಸರ್ಕಾರದ ನೀತಿಗಳು ಕಾರಣವಾಗಿರಲಿಲ್ಲ. ಕಾಂಗ್ರೆಸ್ ಪಕ್ಷ ಗಾಂಧಿ-ನೆಹರು ಕುಟುಂಬವನ್ನು ಯಾರೂ ಗುರುತಿಸುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಹಿನ್ನೆಲೆಗೆ ತಳ್ಳಲಾಯಿತು ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಎಲ್ಲ ಸೋಲುಗಳನ್ನು ನರಸಿಂಹರಾವ್ ಅವರ ಮೇಲೆ ಆರೋಪಿಸಲಾಗುತ್ತಿದೆ ಮತ್ತು ಅವರ ಕೊಡುಗೆಯ ಶ್ರೇಯಸ್ಸನ್ನು ಅವರಿಗೆ ಸಲ್ಲಿಸಿಲ್ಲ. ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಕ್ಷಮೆ ಕೋರಬೇಕೆಂದು ಒತ್ತಾಯಿಸುತ್ತೇನೆ. ಅವರು ಬಂದು ಗೌರವ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಪಿ ವಿ ನರಸಿಂಹ ರಾವ್ ಅವರ 98ನೇ ಜನ್ಮ ದಿನಾಚರಣೆ ಪ್ರಯುಕ್ತ ಗೌರವ ಸಲ್ಲಿಸಲು ಆಗಮಿಸಿದ್ದ ಸುಭಾಷ್ ಅವರು ಕಾಂಗ್ರೆಸ್ ಮತ್ತು ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕಿದರು.


ಸಂಬಂಧಿತ ಟ್ಯಾಗ್ಗಳು

P V Narasimha Rao Neharu Gandhi Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ