ಸಮಸ್ತ ಮಾನವ ಕುಲಕ್ಕೆ ಭಯೋತ್ಪಾದನೆಯಿಂದ ಬೆದರಿಕೆ: ನರೇಂದ್ರ ಮೋದಿ

terrorism is  a threat to whole humanity: Narendra Modi

28-06-2019

ಒಸಾಕ: ಸಮಸ್ತ ಮಾನವ ಕುಲಕ್ಕೆ ಭಯೋತ್ಪಾದನೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಉಗ್ರವಾದ ಸೇರಿದಂತೆ ಇಂದು ಜಗತ್ತು ಪ್ರಮುಖವಾದ ಮೂರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.  ಜಪಾನ್‍ನ   ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವವನ್ನು  ಮೂರುಪ್ರಮುಖ  ಸಮಸ್ಯೆಗಳು ಬಾಧಿಸುತ್ತಿವೆ. ವಾಣಿಜ್ಯ ಸಮರದಿಂದ ಜಾಗತಿಕ ಮಟ್ಟದಲ್ಲಿ ಉದ್ಭವಿಸಿರುವ ಆರ್ಥಿಕ ಅನಿಶ್ಚಿತತೆ,  ನಿಯಮ ಆಧಾರಿತ  ಬಹುಪಕ್ಷೀಯ ಅಂತರರಾಷ್ಟ್ರೀಯ  ವ್ಯಾಪಾರ ವ್ಯವಸ್ಥೆಯಲ್ಲಿ ಏಕಪಕ್ಷೀಯ ನಿರ್ಧಾರ ಮತ್ತು ದ್ವಂದ್ವಮಯ ವಾತಾವರಣದಿಂದ ಎದುರಾಗುತ್ತಿರುವ ಸಮಸ್ಯೆಗಳು ಮತ್ತು ಆರ್ಥಿಕ ಪ್ರಗತಿಯಡೆಗೆ ಸಾಗುತ್ತಿರುವ ದೇಶಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಆಗಿರುವ  ಹೂಡಿಕೆಯಲ್ಲಿ 1.3 ಟ್ರಿಲಿಯನ್ ಡಾಲರ್ ಕೊರತೆ ಇದೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Narendra Modi G20 summit Terrorism Prime minister


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ