ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ನೇಮಕ

leelavati r prasad is now state  chief of JDS

27-06-2019

 ಬೆಂಗಳೂರು: ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರಾಗಿ ಹಿರಿಯ ನಾಯಕಿ,ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

ಇಂದು ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ಮಹಿಳಾ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಂತಿಮವಾಗಿ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಿದ್ದಾರೆ.

ಕರ್ನಾಟಕ ಯಾವುದೇ ಕ್ಷಣದಲ್ಲಿ ಮಧ್ಯಂತರ ಚುನಾವಣೆಗೆ ಅಣಿಯಾಗಬೇಕಾಗಿ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ದೇವೇಗೌಡ ಇದೀಗ ತುರ್ತಾಗಿ ಪಕ್ಷ ಸಂಘಟನೆಗೆ ಸಜ್ಜಾಗಿದ್ದಾರೆ ಎಂಬುದು ಅವರ ಸಮೀಪವರ್ತಿಗಳ ಮಾತು.

ಒಂದು ವೇಳೆ ಕಾಂಗ್ರೆಸ್ ಜತೆಗಿನ ಸಖ್ಯಕ್ಕೆ ತೆರೆ ಹೇಳಿ ಪರ್ಯಾಯ ಸರ್ಕಾರವನ್ನು ತರುವ ವಿಷಯದಲ್ಲಿ ಒಳಮಾತುಕತೆಗಳು ನಡೆದಿದ್ದರೂ ಅಂತಿಮವಾಗಿ ಮಧ್ಯಂತರ ಚುನಾವಣೆಯೇ ಅನಿವಾರ್ಯವಾದರೆ ಅದಕ್ಕೆ ಸಜ್ಜಾಗಬೇಕು ಎಂಬುದು ಅವರ ಯೋಚನೆ.

ಈ ಮಧ್ಯೆ ರಾಜ್ಯ ಜಾತ್ಯಾತೀತ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಎ.ಹೆಚ್.ವಿಶ್ವನಾಥ್ ಅವರು ರಾಜೀನಾಮೆ ನೀಡಿರುವುದರಿಂದ ಪಕ್ಷ ಸಂಘಟನೆ ಕುಸಿಯುತ್ತಿದೆ ಎಂಬ ಬಾವನೆ ಮೂಡತೊಡಗಿತ್ತು.

ಈ ಹಿನ್ನೆಲೆಯಲ್ಲಿ ಇವೆಲ್ಲಕ್ಕೂ ಉತ್ತರವೆಂಬಂತೆ ಪಕ್ಷ ಸಂಘಟನೆಯ ವಿಷಯದಲ್ಲಿ ಅತ್ಯಾಸಕ್ತಿ ತೋರಿಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತ್ವರಿತವಾಗಿ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.

ಅದರ ಪರಿಣಾಮವಾಗಿಯೇ ಇಂದು ಪಕ್ಷದ ಮಹಿಳಾ ಘಟಕದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿದ ದೇವೇಗೌಡರಿಗೆ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಅವರನ್ನು ನೇಮಕ ಮಾಡುವಂತೆ ಹೆಚ್ಚು ಮಂದಿ ಸಲಹೆ ನೀಡಿದರು.

ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ದೇವೇಗೌಡ ಇದೀಗ ಶ್ರೀಮತಿ ಲೀಲಾದೇವಿ ಆರ್.ಪ್ರಸಾದ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ನಿರ್ಧರಿಸಿದ್ದು,ಅದೇ ಕಾಲಕ್ಕೆ ಜಾತ್ಯಾತೀತ ಜನತಾದಳದ ಬೆಂಗಳೂರು ನಗರ ಘಟಕದ ಅಧ್ಯಕ್ಷರನ್ನಾಗಿ ರುತ್ ಮನೋರಮಾ ಅವರನ್ನು ನೇಮಕ ಮಾಡಲು ತೀರ್ಮಾನಿಸಿದ್ದಾರೆ.

ಮೂಲಗಳ ಪ್ರಕಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನೂ ಒಂದೆರಡು  ದಿನಗಳಲ್ಲಿ ಭರ್ತಿ ಮಾಡಲು ದೇವೇಗೌಡ ತೀರ್ಮಾನ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Leelavati R Prasad JDS HD Devegowda HD Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ