ಇದು ಅವಧಿಪೂರ್ವ ಪ್ರಸವದ ಅಡ್ಡ ಪರಿಣಾಮ!

Premature birth affects infant’s brain health

27-06-2019

ತಿಂಗಳು ತುಂಬಿ ಹುಟ್ಟುವ ಮಕ್ಕಳ ಆರೋಗ್ಯ ಅವಧಿಗೂ ಮೊದಲೇ ಹುಟ್ಟುವ ಮಕ್ಕಳ ಆರೋಗ್ಯಕ್ಕಿಂತಲೂ ಚೆನ್ನಾಗಿರುತ್ತೆ ಎಂಬುದು ಸಾಮಾನ್ಯ ಸಂಗತಿ. ಆದರೆ ಅವಧಿಗೂ ಮೊದಲೇ ಹುಟ್ಟುವ ಮಕ್ಕಳಲ್ಲಿ ಸಾಮಾನ್ಯರು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.

ಹೌದು, 27 ವಾರ ಅಥವಾ ಅದಕ್ಕಿಂತಲೂ ಮೊದಲು ಹುಟ್ಟುವ ಶಿಶುವಿನಲ್ಲಿ ಮೆದುಳಿನ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ನೇಚರ್ ಕಮ್ಯುನಿಕೇಷನ್ ಎನ್ನುವ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಈ ಅಧ್ಯಯನಕ್ಕಾಗಿ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ 94 ಶಿಶುಗಳನ್ನು ಪರೀಕ್ಷಿಸಲಾಗಿದ್ದು, ಅವಧಿಗೆ ಮುನ್ನ ಹುಟ್ಟುವ ಶಿಶು ಮಲಗಿದಾಗ ಮೆದುಳಿನಲ್ಲಿ ಆಗುವ ಬದಲಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಮಗು ಚೆನ್ನಾಗಿ ಮಲಗಿದಾಗ ಅದರ ಮೆದುಳಿನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತವೆ. ಆದರೆ ಹೀಗೆ ಹುಟ್ಟುವ ಶಿಶುಗಳಲ್ಲಿ ಆ ಬೆಳವಣಿಗೆಗಳು ಅಷ್ಟು ಚೆನ್ನಾಗಿ ನಡೆಯದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Premature birth Study Infant Brain Health


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ