ಹರಿಯಾಣ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿ ಹತ್ಯೆ

congress Leader Vikas Choudhari shot dead

27-06-2019

ಚಂಡೀಘಡ: ಹರಿಯಾಣದ ಕಾಂಗ್ರೆಸ್ ನಾಯಕ ವಿಕಾಸ್ ಚೌಧರಿಯವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ದೆಹಲಿ ಬಳಿಯ ಫರೀದಾಬಾದ್‍ ಬಳಿ, ವಿಕಾಸ್ ಮುಂಜಾನೆ ಜಿಮ್ ನಿಂದ ವಾಪಸಾಗುತ್ತಿದ್ದ ಸಮಯದಲ್ಲಿ ಕಾರಿನ ಮೇಲೆ ಸತತ 10 ಗುಂಡುಗಳ ದಾಳಿ ನಡೆಸಿ, ದುಷ್ಕರ್ಮಿಗಳು ಪರಾರಿಯಾಗಿದ್ದರು. ನಂತರ ವಿಕಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಪಕ್ಷದ ನಾಯಕನ ಹತ್ಯೆಯನ್ನು ಖಂಡಿಸಿರುವ ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವರ್, ನಮ್ಮ ಪಕ್ಷದ ನಾಯಕ ವಿಕಾಸ್ ಚೌಧರಿಯವರನ್ನು ಗುಂಡು ಹಾರಿಸಿ, ಫರೀದಾಬಾದ್‍ನಲ್ಲಿ ಹತ್ಯೆಗೈಯಲಾಗಿದೆ. ರಾಜ್ಯದಲ್ಲಿ ಕಾನೂನಿನ ಭಯವೇ ಇಲ್ಲವಾಗಿದೆ. ನಿನ್ನೆ ಕೂಡ ಇಂಥದ್ದೇ ಘಟನೆ ನಡೆದಿತ್ತು. ಆಗ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hariyana Fharidabad Vikas Choudhari Shot dead


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ