ಮಗನ ಸೋಲಿನಿಂದ ಕುಮಾರಸ್ವಾಮಿ ತಲೆಕೆಟ್ಟಿದೆ: ಪ್ರಲ್ಹಾದ್ ಜೋಷಿ

Prahlad Joshi statement

27-06-2019

ದೆಹಲಿ: ಮಗನ ಸೋಲಿನಿಂದ ಸಿಎಂ ಕುಮಾರಸ್ವಾಮಿಯವರ ತಲೆಕೆಟ್ಟಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು. ರಾಜ್ಯದ ಜನತೆ ಕುಮಾರಸ್ವಾಮಿಯವರಿಗೆ ಸಿಎಂ ಆಗಿ ಎಂದು ಮತ ಹಾಕಿಲ್ಲ. ಅವರು ಸಿಎಂ ಆಗಿರುವುದು ಏಕೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಗೆ ಅನಾರೋಗ್ಯಕರ ಮೈತ್ರಿಯ ಮೂಲಕ ಅವರು ಸಿಎಂ ಆಗಿದ್ದಾರೆ ಎಂದರು.

2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಕುಮಾರಸ್ವಾಮಿ ಕಣಕ್ಕಿಳಿಸಿದ್ದರು. ಆದರೆ, ಇಲ್ಲಿ ಪಕ್ಷೇತರ ಅಭ್ಯರ್ಥಿ ಮತ್ತು ಅಂಬರೀಷ್ ಪತ್ನಿ ಸುಮಲತಾ ಗೆಲುವು ದಾಖಲಿಸಿದ್ದರು. ಜೊತೆಗೆ, ತುಮಕೂರಿನಿಂದ ಸ್ಪರ್ಧಿಸಿದ್ದ ಎಚ್‍ಡಿಕೆ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕೂಡ ಸೋಲುಂಡಿದ್ದರು.

ನಿನ್ನೆ ರಾಯಚೂರಿನಲ್ಲಿ ಸಿಎಂ ಬಸ್ ಅನ್ನು ಕೆಲವರು ತಡೆದಿದ್ದರು. ಆಗ ವೋಟು ಮೋದಿಗೆ, ಕೆಲಸಕ್ಕೆ ನಾವಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಷಿಯವರು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

Prahlad Joshi H D Devegowda H D Kumaraswamy Nikhil Kumarswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ